

ಅಂದಾಸುರ ರೈಲ್ವೆ ಹಳಿ ಮೇಲೆ ಪುರುಷನ ಶವ ಪತ್ತೆ – ಕೊಲೆ ಶಂಕೆ !?
ರೈಲ್ವೆ ಹಳಿಯ ಮೇಲೆ ಅನುಮಾನಸ್ಪದ ರೀತಿಯಲ್ಲಿ ಪುರುಷನೊಬ್ಬನ ಶವ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿ ನಡೆದಿದೆ.

ಅಂದಾಸುರ ರೈಲ್ವೆ ಗೇಟ್ ಸಮೀಪದಲ್ಲಿರುವ ದೇವಸ್ಥಾನವೊಂದರ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು , ಮೃತ ವ್ಯಕ್ತಿಯನ್ನು ಕೋಡೂರು ಮೂಲದ ಜೆಸಿಬಿ ಆಪರೇಟರ್ ಬಸವರಾಜ್ ಎನ್ನಲಾಗುತಿದ್ದು ಇನ್ನಷ್ಟೇ ಮಾಹಿತಿ ತಿಳಿದುಬರಬೇಕಾಗಿದೆ.
ರೈಲು ಹಳಿಯ ಮೇಲೆ ಮೃತದೇಹ ಪತ್ತೆಯಾಗಿದ್ದು ಮುಖದ ಭಾಗದಲ್ಲಿ ಗಾಯವಾಗಿದೆ. ಮೃತ ವ್ಯಕ್ತಿಗೆ ಸಂಬಂಧಿಸಿದ ಬೈಕ್ ಹಾಗೂ ವಸ್ತುಗಳು ರೈಲೆ ಹಳಿಯ ಪಕ್ಕದಲ್ಲಿರಿಸಲಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಥಳಕ್ಕೆ ರೈಲ್ವೆ ಪೊಲೀಸರು ಇನ್ನಷ್ಟೇ ಬರಬೇಕಾಗಿದ್ದು ಪೊಲೀಸ್ ತನಿಖೆಯಿಂದ ಈ ಪ್ರಕರಣದ ಸತ್ಯಾಂಶ ಹೊರಬರಬೇಕಾಗಿದೆ.
ರೈಲು ಗುದ್ದಿ ಮೃತಪಟ್ಟಿದ್ದಲ್ಲಿ ಮೃತದೇಹ ಚೆಲ್ಲಾಪಿಲ್ಲಿಯಾಗಿ ಬೇರೆ ಕಡೆ ಬೀಳಬೇಕಾಗಿತ್ತು,ಒಂದು ವೇಳೆ ರೈಲು ಹರಿದು ಸಾವನ್ನಪ್ಪಿದ್ದರೆ ಮೃತದೇಹ ತುಂಡಾಗುತಿತ್ತು ಹಾಗಾಗಿ ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಹಾಕಿದ್ದಾರೆ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತಿದ್ದಾರೆ.
