Headlines

RIPPONPETE | ಮೆಕ್ಕಾ ಮಸೀದಿಯಲ್ಲಿ ನಾಳೆ ಈದ್ ಮಿಲಾದ್ ಸಂಭ್ರಮ

GridArt 20240920 203624855.jpg

RIPPONPETE | ಮೆಕ್ಕಾ ಮಸೀದಿಯಲ್ಲಿ ನಾಳೆ ಈದ್ ಮಿಲಾದ್ ಸಂಭ್ರಮ

ರಿಪ್ಪನ್‌ಪೇಟೆ : ಪಟ್ಟಣದ ಮೆಕ್ಕಾ ಜುಮ್ಮಾ ಮಸೀದಿ ವತಿಯಿಂದ ಶನಿವಾರ ಸಂಜೆ 5.30 ಕ್ಕೆ ಮಸೀದಿ ಆವರಣದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1499ನೇ ಜನ್ಮ ದಿನದ ಅಂಗವಾಗಿ ಜಶ್ನೇ ಈದ್ ಮಿಲಾದುನ್ನಭಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮೆಕ್ಕಾ ಮಸೀದಿಯ ಈದ್ ಮಿಲಾದ್ ಸಮಿತಿ ಅಧ್ಯಕ್ಷರಾದ ಇರ್ಫ಼ಾನ್ ಹಾಗೂ ಪ್ರಧಾನ ಕಾರ್ಯದರ್ಶಿ ನಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ಶನಿವಾರ ಸಂಜೆ 5.30 ಕ್ಕೆ ಮೆಕ್ಕಾ ಮಸೀದಿಯ ಧರ್ಮಗುರು ಮೊಹಮ್ಮದ್ ರಾಫ಼ಿದ್ ಹುಸೇನ್ ರಜ್ವಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ನಂತರದಲ್ಲಿ ಮದರಸ ಮಕ್ಕಳಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.ರಾತ್ರಿ 08.30ಕ್ಕೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರುಗಳಾದ ಮುನೀರ್ ಸಖಾಫ಼ಿ ರವರಿಂದ ಕನ್ನಡದಲ್ಲಿ ಪ್ರವಚನ , ಹಾನಗಲ್ ನ ಸಲೀಂ ರಝಾ ಮಕ್ಬೂಲಿ ರವರಿಂದ ನಾತೇ ಶರೀಫ್ , ರಾಯಚೂರಿನ ಮೊಹಮ್ಮದ್ ಜಾಫರ್ ಖಾನ್ ಖಾದ್ರಿ ರವರಿಂದ ಉರ್ದು ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.