RIPPONPETE | ಈದ್ ಮಿಲಾದ್ ಕಾರ್ಯಕ್ರಮಕ್ಕೆ ಹೋಳಿಗೆ ವಿತರಿಸಿ ಸೌಹಾರ್ಧತೆ ಮೆರೆದ ಹಿಂದೂ ಮಹಾಸಭಾ ಸಮಿತಿ
ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1499ನೇ ಜನ್ಮ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯವರು ಹೋಳಿಗೆ ವಿತರಿಸುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ.

ಈದ್ ಮಿಲಾದ್ ಮೆರವಣಿಗೆ ವಿನಾಯಕ ವೃತ್ತದಿಂದ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಹಿಂಭಾಗದ ಕೂರ ತಂಝಲ್ ಸಭಾ ಭವನಕ್ಕೆ ತೆರಳಿದ ವೇಳೆಯಲ್ಲಿ ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭೇಟಿ ನೀಡಿ ಧರ್ಮಗುರುಗಳ ಸಮ್ಮುಖದಲ್ಲಿ ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಿಗೆ ಭಕ್ತಾಧಿಗಳಿಗೆ ವಿತರಿಸಲು ಹೋಳಿಗೆಯನ್ನು ನೀಡಿ ಸೌಹಾರ್ಧತೆ ಮೆರೆದಿದ್ದಾರೆ.
ಈ ಸಂಧರ್ಭದಲ್ಲಿ ಧರ್ಮಗುರು ಮುನೀರ್ ಸಖಾಫಿ , ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್ , ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ನಾಸೀರ್ ಹಮೀದ್ ಸಾಬ್ , ಮುಖಂಡರಾದ ಸತೀಷ್ ಎನ್ , ಸುರೇಶ್ ಸಿಂಗ್ ,ರವೀಂದ್ರ ಕೆರೆಹಳ್ಳಿ , ಭಾಸ್ಕರ್ ಶೆಟ್ಟಿ , ನಿರೂಪ್ ಕುಮಾರ್, ಶ್ರೀಧರ್ ,ವಿಷ್ಣು ವಿದ್ಯಾನಗರ , ಮುರುಳಿ ಕೆರೆಹಳ್ಳಿ , ಮಂಜುನಾಥ್ ಕೆರೆಹಳ್ಳಿ ಇದ್ದರು.