Headlines

ಹಾವು ಕಚ್ಚಿ ಬಾಣಂತಿ ಸಾವು | ಅನಾಥವಾದ ಇಬ್ಬರು ಪುಟ್ಟ ಕಂದಮ್ಮಗಳು

GridArt 20240809 215006334.jpg

ಹಾವು ಕಚ್ಚಿ ಬಾಣಂತಿ ಸಾವು | ಅನಾಥವಾದ ಇಬ್ಬರು ಪುಟ್ಟ ಕಂದಮ್ಮಗಳು

ನಾಗರ ಪಂಚಮಿಯ ದಿನವೇ ಹಾವು(cobra) ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆಸಾಗರ (Sagara) ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ.

ಹುತ್ತಾದಿಂಬ ಗ್ರಾಮದ 22 ವರ್ಷದ ರಂಚಿತಾ ಎಂಬ ಮಹಿಳೆ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ.

ಶಿವಮೊಗ್ಗ(Shivamogga) ಜಿಲ್ಲೆಯ ಸಾಗರ ತಾಲ್ಲೂಕಿನ ಹುತ್ತದಿಂಬ ಗ್ರಾಮದ 22 ವರ್ಷದ ರಂಜಿತಾ ಅವರು ಇಂದು ಹಸುವಿಗೆ ಮೇವು ತರಲೆಂದು ಗದ್ದೆಗೆ ತೆರಳಿದ್ದರು. ಈ ವೇಳೆ ಅವರಿಗೆ ಹಾವು ಕಚ್ಚಿ(snake bite) ಗದ್ದೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗೆ ಅವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ ಆದರೆ ಮಹಿಳೆಯೆಯು ಮಾರ್ಗ ಮಧ್ಯೆಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಮಹಿಳೆಗೆ 3 ವರ್ಷದ ಹೆಣ್ಣು ಮಗು ಹಾಗೂ 4 ತಿಂಗಳ ಗಂಡು ಮಗು ಇದ್ದು ತಾಯಿಯನ್ನು ಕಳೆದುಕೊಂಡು ಪುಟ್ಟ ಮಕ್ಕಳು ಅನಾಥವಾಗಿವೆ. ಮಹಿಳೆಯ ಮೃತದೇಹ ಮೆಗಾನ್ ಆಸ್ಪತ್ರೆಯ ಶವಾಗಾರದಲ್ಲಿದೆ.

Snake bite

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.