w
Headlines
Home » Ripponpete | ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತ – ತಪ್ಪಿದ ಭಾರಿ ಅನಾಹುತ

Ripponpete | ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತ – ತಪ್ಪಿದ ಭಾರಿ ಅನಾಹುತ

GridArt 20240817 185320230.jpg

Ripponpete | ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತ – ತಪ್ಪಿದ ಭಾರಿ ಅನಾಹುತ

ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿದ ಕೋಕ್ ತುಂಬಿದ ಲಾರಿಯೊಂದು ಅಪಘಾತವಾಗಿ ಮರಕ್ಕೆ ತಗುಲಿ ನಿಂತಿರುವ ಘಟನೆ ಸಿದ್ದಪ್ಪನಗುಡಿ ಬಳಿಯಲ್ಲಿ ನಡೆದಿದೆ.

ರಿಪ್ಪನ್‌ಪೇಟೆ ಕಡೆಯಿಂದ ಆಯನೂರು ಕಡೆಗೆ ತೆರಳುತಿದ್ದ ಕಲ್ಲಿದ್ದಲು ತುಂಬಿದ್ದ ಲಾರಿ ಎದುರಿನಿಂದ ಬಂದ ವಾಹನದ ಕಣ್ನೂ ಕುಕ್ಕುವ ಲೈಟ್ ಗೆ ನಿಯಂತ್ರಣ ತಪ್ಪಿ ಸುಮಾರು ಹತ್ತು ಅಡಿಗೂ ಹೆಚ್ಚಿರುವ ಕಂದಕದತ್ತ ಉರುಳಿದೆ ಆದರೆ ಅದೃಷ್ಟವಶಾತ್ ಮರವೊಂದು ಇದ್ದಿದ್ದರಿಂದ ಲಾರಿ ಪಲ್ಟಿಯಾಗಿ ಮರಕ್ಕೆ ತಾಗಿ ನಿಂತು ಭಾರಿ ಅನಾಹುವೊಂದು ತಪ್ಪಿದೆ.

ಅಪಘಾತದಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿರುವುದಿಲ್ಲ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.