District Okkaligar Sangh Director Election Result Announced | Allegation of malpractice in election – Complaint
ಶಿವಮೊಗ್ಗ ಒಕ್ಕಲಿಗ ಸಂಘದ ಜಿಲ್ಲಾ ಸಂಘದ 21 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು 20 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ. ಈ ಚುನಾವಣೆಯಲ್ಲಿ ಲೋಪ ನಡೆದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿ ದೂರು ಸಲ್ಲಿಸಿರುವ ಘಟನೆ ನಡೆದಿದೆ.
ಭಾನುವಾರ ನಡೆದ ಚುನಾವಣೆಯಲ್ಲಿ ಲೋಪ ನಡೆದಿದೆ ಕೂಡಲೇ ಫಲಿತಾಂಶ ತಡೆ ಹಿಡಿದು ಮರುಎಣಿಕೆ ನಡೆಸಬೇಕು ಎಂದು ಒತ್ತಾಯಿಸಿ ಒಕ್ಕಲಿಗ ಸಂಘದ ಸದಸ್ಯರಾದ ದೇವೇಂದ್ರಪ್ಪ ರವರು ಚುನಾವಣಾಧಿಕಾರಿ ಕೃಷ್ಣಪ್ಪ ರವರಿಗೆ ದೂರು ಸಲ್ಲಿಸಿದ್ದಾರೆ.
ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮೇಶ್ ಹೆಗ್ಡೆ 2001 ಮತಗಳನ್ನ ಪಡೆದು ಮೊದಲ ಆಯ್ಕೆಯಾಗಿದ್ದಾರೆ.ಮೂರು ಜನ ಮಹಿಳೆಯರಿಗೆ ಮೀಸಲಿದ್ದ ಸ್ಥಾನಕ್ಕೆ 6 ಜನ ಸ್ಪರ್ಧಿಸಿದ್ದರು. ಭಾನುವಾರ 12-30 ರಾತ್ರಿಯ ವರೆಗೂ ಮತ ಎಣಿಕೆಯಾಗಿದ್ದು ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ.
ಈ ಕುರಿತು ಸಂಘದ ಕಾರ್ಯಕಾರಿಣಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ರಮೇಶ್ ಹೆಗಡೆ, ಡಾ.ಕಡಿದಾಳ್ ಗೋಪಾಲ, ರವಿ ಕುಮಾರ್ ಸೇರಿ 20 ಜನ ಆಯ್ಕೆಯಾಗಿದ್ದಾರೆ. ಮಹಿಳೆಯರ ಆಯ್ಕೆ ಏನಾಗಲಿದೆ ಕಾದು ನೋಡಬೇಕಿದೆ.
ಚುನಾವಣೆಗಳಲ್ಲಿ 29 ಜನ ಸ್ಪರ್ಧಿಸಿದ್ದರು. 21 ಜನರ ಸಿಂಡಿಕೇಟ್ ನಿರ್ಮಿಸಿದ್ದರು. 4137 ಮತಗಳಲ್ಲಿ 2599 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ 2024ರ ಸದಸ್ಯರ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತ್ತು ಮತಗಳು ಹೀಗಿವೆ
District Okkaligar Sangh Director Election Result Announced | Allegation of malpractice in election – Complaint
ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…
ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…
ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…
ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…
ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…
ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…