January 11, 2026

ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ ದಂಪತಿಗಳಿಗೆ ಆಹ್ವಾನ

ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ ದಂಪತಿಗಳಿಗೆ ಆಹ್ವಾನ

ರಿಪ್ಪನ್ ಪೇಟೆ :  ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ರಿಪ್ಪನ್ ಪೇಟೆ ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಎಂ ಬಿ. ಲಕ್ಷ್ಮಣಗೌಡ ದಂಪತಿಗಳು ಈ ತಿಂಗಳು ಅಮೆರಿಕಾದ ವರ್ಜೀನಿಯಾದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ 12ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಈ ಬಗ್ಗೆ ಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಎಂ ಬಿ ಲಕ್ಷ್ಮಣಗೌಡ ಅಮೆರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ ಆಹ್ವಾನ ಬಂದಿರುವುದಕ್ಕೆ ನನಗೆ ಹಾಗೂ ನನ್ನ ಪತ್ನಿ  ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷೆ ಪ್ರಮೀಳಾ ಲಕ್ಷ್ಮಣ ಗೌಡರವರಿಗೆ ತುಂಬಾ ಸಂತಸವಾಗಿದೆ ಎಂದರು.

ನನ್ನ ಅಳಿಯರಾದ ಮನು ಗೋರೂರ್ ರವರು ಕಳೆದ ಹತ್ತು ವರ್ಷಗಳಿಂದ ಅಮೆರಿಕದ ವಿವಿಧ ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದು ಈ ಬಾರಿ ನಡೆಯುವ ಅಕ್ಕ ಸಮ್ಮೇಳನದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕ ಕನ್ನಡ ಕೂಟಗಳ ಒಕ್ಕೂಟವು (ಅಕ್ಕ) ಮುಂಬರುವ ಆಗಸ್ಟ್ 30ರಿಂದ ಸೆ 1ರವರೆಗೆ ಅಮೆರಿಕದ ವರ್ಜೀನಿಯಾದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ 12ನೇ ವಿಶ್ವ ಕನ್ನಡ ಸಮ್ಮೇಳನ ಹಮ್ಮಿಕೊಂಡಿದೆ. ವಾಷಿಂಗ್ಟನ್‌ ಡಿ.ಸಿ. ಕಾವೇರಿ ಕನ್ನಡ ಸಂಘ, ರಿಚ್ಮಂಡ್‌ ಕನ್ನಡ ಸಂಘದ ಆಶ್ರಯದಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.

ಅಕ್ಕ ಸಮ್ಮೇಳನಕ್ಕೆ ತೆರಳುತ್ತಿರುವ ಲಕ್ಷ್ಮಣಗೌಡ ದಂಪತಿಗಳಿಗೆ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಅಧ್ಯಕ್ಷರಾದ ರಾಮಚಂದ್ರ ಕಾರ್ಯದರ್ಶಿ ಸೆಬಾಸ್ಟಿಯನ್ ,ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷರಾದ ಹಾಲುಗುಡ್ಡೆ ಹರೀಶ್ ರವರು ಮತ್ತು ಉಪಾಧ್ಯಕ್ಷರಾದ ಎಂಎಂ ಪರಮೇಶ್ , ವಜ್ರಾಕ್ಷಮ್ಮ  ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಇ ಡಿ ಮಂಜುನಾಥ್ ಕಲ್ಲೂರ್ , ಖಜಾಂಚಿ ಟಿ ಎಂ ಕೃಷ್ಣಮೂರ್ತಿಯವರು ಮತ್ತು ಸಹ ಕಾರ್ಯದರ್ಶಿವರಾದ ಷಣ್ಮುಖಪ್ಪ ಗೌಡ ಬೈರಾಪುರ ಸಂತೋಷ್ ಕುಮಾರ್ ಹೆಚ್ ವೈ ಹಾಲ್ಗುಡ್ಡೆ ಮತ್ತು ಎಲ್ಲಾ ನಿರ್ದೇಶಕರುಗಳು ತಾಲೂಕ್ ಒಕ್ಕಲಿಗರ ಸಂಘ  ಹಾಗೂ ರೋಟರಿ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.

12 ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಹ್ವಾನಿತರಾಗಿ ಅಮೆರಿಕಾಕ್ಕೆ ತೆರಳುತ್ತಿರುವ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಬಿ ಲಕ್ಷ್ಮಣ ಗೌಡ ಹಾಗೂ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷೆ ಪ್ರಮೀಳಾ ಎಂ ಗೌಡ ರವರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ವತಿಯಿಂದ ಹಾರ್ದಿಕ ಶುಭಾಶಯಗಳು..

About The Author

Leave a Reply

Your email address will not be published. Required fields are marked *