ರಿಪ್ಪನ್ ಪೇಟೆಯಲ್ಲಿ ರೋಟರಿ ಪದವಿ ಪ್ರಮಾಣ ಸಮಾರಂಭ.
ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಅವಕಾಶವಿದೆ : ಹೆಚ್. ಎಲ್. ರವಿ
ರಿಪ್ಪನ್ ಪೇಟೆ : ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಅವಕಾಶವಿರುತ್ತದೆ. ಆ ಅವಕಾಶಗಳನ್ನು ಉಪಯೋಗಿಸಿ ಕೊಳ್ಳುವುದರ ಮೂಲಕ ಸಮಾಜ ಸೇವೆಗೆ ಮುಂದಾಗ ಬೇಕೆಂದು ರೋಟರಿ ಜಿಲ್ಲಾ 3182 ರ ಮಾಜಿ ಗವರ್ನರ್ ರೋ. ಹೆಚ್. ಎಲ್. ರವಿ ಹೇಳಿದರು.
ಪಟ್ಟಣದ ರೋಟರಿ ಕ್ಲಬ್ ವತಿಯಿಂದ ಜಿ. ಎಸ್. ಬಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ರೋಟರಿ ಸಂಸ್ಥೆ ಅಂತರ್ ರಾಷ್ಟ್ರೀಯ ಸಂಸ್ಥೆ ಯಾಗಿದ್ದು ಸಮಾಜ ಸೇವೆ ಮಾಡುವ ಸದುದ್ದೇಶದಿಂದ ಪ್ರಪಂಚದ 225 ಅಧಿಕ ರಾಷ್ಟ್ರಗಳಲ್ಲಿ ರೋಟರಿ ಸಂಸ್ಥೆ ಸ್ಥಾಪನೆಯಾಗಿದ್ದು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿದೆ. ಹಾಗೆಯೇ ನಮ್ಮ ಜಿಲ್ಲೆಯಲ್ಲಿ ಸಹ ritsrಸಂಸ್ಥೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದರ ಮೂಲಕ ನೂರಾರು ಸಂಖ್ಯೆಯಲ್ಲಿ ಉಚಿತ ಆರೋಗ್ಯ ಶಿಬಿರ, ನೇತ್ರ ತಪಾಸಣಾ ಶಿಬಿರ ಹಾಗೂ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ. ಪ್ರತಿಯೊಬ್ಬರು ರೋಟರಿ ಸಂಸ್ಥೆ ಹಾಗೆಯೇ ಸಮಾಜದಲ್ಲಿನ ಸೇವಾ ಸಂಸ್ಥೆಯೊಂದಿಗೆ ಗುರುತಿ ಸಿಕೊಳ್ಳುವುದರ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಎಂದರು.
ರೋಟರಿ 3182ರ ಅಸಿಸ್ಟೆಂಟ್ ಗವರ್ನರ್ ರೋ. ಹೆಚ್. ಎಂ. ಸುರೇಶ್ ಮಾತನಾಡಿ ಸಮಾಜ ಸೇವೆಯನ್ನು ಮಾಡಬೇಕೆ ಎನ್ನುವ ಸದುದ್ದೇಶದಿಂದ ರೋಟರಿ ಸಂಸ್ಥೆಗೆ ಸೇರಿ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ರಿಪ್ಪನ್ ಪೇಟೆ ರೋಟರಿ ಸಂಸ್ಥೆ ಅನೇಕ ಸಮಾಜ ಸೇವಾಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದೆ ಇದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ಬಿನ ಅಧ್ಯಕ್ಷ ಆರ್. ಎಚ್. ದೇವದಾಸ್ ವಹಿಸಿದ್ದರು.
ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ರಾಮಚಂದ್ರ ಕೆರೆಹಳ್ಳಿ, ಕಾರ್ಯದರ್ಶಿಯಾಗಿ ಸಬಾಸ್ಟಿನ್ ಮ್ಯಾಥ್ಯೂ ಸ್ ಪದವಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಎಸ್ಎಸ್ ಎಲ್ ಸಿ. ದ್ವಿತೀಯ ಪಿಯುಸಿ ಹಾಗೂ ಅಂತಿಮ ಪದವಿ ತರಗತಿಗಳಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ರೋಟರಿ 3182 ವಲಯ ಹನ್ನೊಂದರ ಝೋನಲ್ ಲೆಫ್ಟಿನೆಂಟ್ ರಾಧಾಕೃಷ್ಣ ಜೆ,, ಸಂಸ್ಥೆಯ ಪದಾಧಿಕಾರಿಗಳಾದ ಎಂ. ಬಿ. ಲಕ್ಷ್ಮಣಗೌಡ, ರಾಧಾಕೃಷ್ಣ ಹೆಚ್. ಎ., ಸಾಜಿ ಜೇಕಬ್, ತಾನಾರಾಮ್ ಪಾಟೀಲ್ ,ಡಾಕಪ್ಪ,ಜಂಬಳ್ಳಿ ಸದಾನಂದ, ನಾಗಭೂಷಣ್ ಆರ್,. ಅಶೋಕ್, ರವೀಂದ್ರ ಬಲ್ಲಾಳ್, ಶಿವಕುಮಾರ್ ಶೆಟ್ಟಿ, ಪ್ರಮೀಳಾ ಲಕ್ಷ್ಮಣಗೌಡ, ಸವಿತಾ ರಾಧಾಕೃಷ್ಣ, ಪ್ರವೀಣಿ ಮಂಜುನಾಥ್, ಅಮಿತಾ ಬಲ್ಲಾಳ್, ವಿಕ್ಟೋರಿಯಾ ಸೆಬಾಸ್ಟಿಯನ್, ದೀಪಾ ಗಣೇಶ್, ಇನ್ನಿತರರಿದ್ದರು.
ಸಂಧ್ಯಾ ಕಾಮತ್ ಪ್ರಾರ್ಥಿಸಿ, ಎಂ.ಬಿ ಲಕ್ಷ್ಮಣಗೌಡ ಸ್ವಾಗತಿಸಿ.ಆರ್ ಗಣೇಶ್., ಮತ್ತು ಎಂ.ಬಿ ಮಂಜುನಾಥ್ ಕಾರ್ಯಕ್ರಮವನ್ನು ನಿರೂಪಿಸಿ,ಸಬಾಸ್ಟಿನ್ ಮ್ಯಾಥ್ಯೂಸ್ ವಂದಿಸಿದರು.