w
Headlines
Home » Humcha | ಭಾರಿ ಮಳೆಗೆ ಕುಸಿದ ರಸ್ತೆ – ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್

Humcha | ಭಾರಿ ಮಳೆಗೆ ಕುಸಿದ ರಸ್ತೆ – ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್


Humcha | ಭಾರಿ ಮಳೆಗೆ ಕುಸಿದ ರಸ್ತೆ – ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ 

ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಜಡ್ಡು ಎಸ್ ಸಿ ಕಾಲೋನಿ – ನಾಗರಹಳ್ಳಿ ಹೋಗುವ ಸೇತುವೆ ಭಾರಿ ಮಳೆಗೆ ಕುಸಿದು ಬಿದ್ದಿದ್ದು ಭಾರಿ ಅನಾಹುತಕ್ಕೆ ಎಡೆಯಾಗಿತ್ತು.


ಈ ಹಿನ್ನಲೆಯಲ್ಲಿ ರಸ್ತೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿದ ಹುಂಚ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ತುರ್ತು ದುರಸ್ತಿಗೆ ಸೂಚಿಸಿದ್ದಾರೆ.


ನಂತರ ಮಾತನಾಡಿದ ಅವರು ಹುಂಚ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಮನೆ ಕುಸಿತ ,ಸಂಪರ್ಕ ಕಡಿತ ಸೇರಿದಂತೆ ಮಳೆಹಾನಿ ಸಮಸ್ಯೆಗಳಿದ್ದಲ್ಲಿ ಕೂಡಲೇ ಗ್ರಾಮಾಡಳಿತದ ಗಮನಕ್ಕೆ ತಂದಲ್ಲಿ ತ್ವರಿತವಾಗಿ ಸ್ಪಂದಿಸುತ್ತೇವೆ , ನಾಗರಹಳ್ಳಿ ಸೇತುವೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.

ಸಂಪರ್ಕ ರಸ್ತೆ ಕುಸಿದಿರುವ ಬಗ್ಗೆ ಶುಕ್ರವಾರ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ವರದಿ ಬಿತ್ತರಿಸಲಾಗಿತ್ತು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ದೇವೇಂದ್ರ ಹುಂಚ , ಗ್ರಾಪಂ ಪಿಡಿಓ ರಮೇಶ್ , ಸತೀಶ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.