ಭಾರಿ ಮಳೆಗೆ ಮರ ಬಿದ್ದು ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ : ರಿಪ್ಪನ್‌ಪೇಟೆ – ಹೊಸನಗರ ಸಂಚಾರ ಅಸ್ತವ್ಯಸ್ತ
ರಿಪ್ಪನ್‌ಪೇಟೆ : ಬೃಹತ್ ಮರ ಬಿದ್ದು ವಿದ್ಯುತ್ ಕಂಬವೊಂದು ಮುರಿದು ರಸ್ತೆಗೆ ರಸ್ತೆಗೆ ಬಿದ್ದ ಪರಿಣಾಮ ರಿಪ್ಪನ್‌ಪೇಟೆ- ಹೊಸನಗರ ಸಂಚಾರ ಅಸ್ತವ್ಯಸ್ತವಾದ ಘಟನೆ ಚಿಕ್ಕಜೇನಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆದಿದೆ.
ಗಾಳಿ ಮಳೆಗೆ ಚಿಕ್ಕಜೇನಿ ಗ್ರಾಪಂ ಮುಂಭಾಗದಲ್ಲಿದ್ದ ಬೃಹತ್ ಮರವೊಂದು ಕೆಳಕ್ಕುರುಳಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ಸಹ ಧಾರಾಶಾಹಿಯಾಗಿವೆ. ಇದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಇದೇ ಸಂಧರ್ಭದಲ್ಲಿ ಕೆಲವೇ ಅಂತರದಲ್ಲಿ ಕಾರೊಂದು ಇದ್ದು ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ತೆರಳಿದ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ಹಾಗೂ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ರಸ್ತೆಯ ಮೇಲೆ ಬಿದ್ದಿದ್ದ ಲೈಟ್ ಕಂಬವನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದ್ದಾರೆ.
ಚಿಕ್ಕ ಜೇನಿ ಗ್ರಾಪಂ ಮುಂಭಾಗದಲ್ಲಿ ಇದ್ದ ಬೃಹತ್ ಮರವನ್ನು ತೆರವುಗೊಳಿಸುವಂತೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿರಲಿಲ್ಲ ಈಗ ಭಾರಿ ಮಳೆಗೆ ಮರ ಧರೆಗುರುಳಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.