Accident | ರೈಲಿಗೆ ಸಿಲುಕಿ ವ್ಯಕ್ತಿ ಸಾವು
ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ವಿದ್ಯಾನಗರ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ಗುರುಪುರದ ನಿವಾಸಿ ರುದ್ರಪ್ಪ (68) ಮೃತ ವ್ಯಕ್ತಿಯಾಗಿದ್ದಾನೆ.
ಮೈಸೂರು ಕಡೆಯಿಂದ ತಾಳಗುಪ್ಪ ಕಡೆ ಹೊರಟಿದ ರೈಲು ಶಿವಮೊಗ್ಗ ವಿದ್ಯಾನಗರದ ರೈಲ್ವೆ ನಿಲ್ದಾಣದಲ್ಲಿ ಸೌದೆ ಆರಿಸಲು ಬಂದಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ
ಗುರುಪುರದ ನಿವಾಸಿ ರುದ್ರಪ್ಪ, ಪ್ರತಿ ದಿನ ವಿದ್ಯಾನಗರ ರೈಲ್ವೆ ನಿಲ್ದಾಣದ ಬಳಿ ಸೌದೆ ಕಟ್ಟಲು ಬರುತ್ತಿದ್ದರು. ಅರ್ಧ ಕಿವುಡು, ಅರ್ಧ ಕಣ್ಣು ಮಂಜಾಗಿದ್ದ ಕಾರಣ ರೈಲಿನ ಶಬ್ದ ಕೇಳದೆ ಆತನ ಮೇಲೆ ರೈಲು ಹರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ