ಬಂಕಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ – ಮೂವರು ದ್ವಿಚಕ್ರವಾಹನ ಕಳ್ಳರು ಅಂದರ್
ಹಾವೇರಿ ಜಿಲ್ಲೆಯ ಶಿಗ್ಗಾವಿ ಸರ್ಕಲ್ ನ, ಬಂಕಾಪುರ ಠಾಣೆ ಪೋಲಿಸರು ದ್ವಿಚಕ್ರ ವಾಹನಗಳ ಕಳ್ಳತನದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.
1) ಅಬ್ದುಲ್ ಖಾದರ್ ಇಸ್ಮಾಯಿಲ್ ತಂದೆ ಮೊಹಮ್ಮದ್ ಗೌಸ್ ಪಣಿಬಂದು, 30 ವರ್ಷ, ಅಕ್ಕಿಆಲೂರು ಮಕ್ಬುಲ್ ನಗರ ಹಾನಗಲ್  ತಾಲೂಕು ಹಾವೇರಿ ಜಿಲ್ಲೆ
 2) ಮಾಲಾಲಿ ತಂದೆ ಮಕ್ಬುಲ್ ಸಾಬ್ ಹಾನಗಲ್ 39 ವರ್ಷ ಚಿಕ್ಕೌoಶಿ ಹೊಸೂರ್ ಹಾನಗಲ್ ತಾಲೂಕು ( ಹಾಲಿ ವಾಸ ಅಕ್ಕಿಆಲೂರು ) ಮತ್ತು
3) ನಿಸ್ಸಾರ್ ಅಹಮದ್ ಆರಿಫ್ ತಂದೆ ಅಬ್ದುಲ್ ಸತ್ತಾರ್ ಹಿರೇ ಕಾಂಶಿ 21 ವರ್ಷ ಅಕ್ಕಿಆಲೂರು ಇಮಾಮ್ ನಗರ ಹಾನಗಲ್ ತಾಲೂಕು ಹಾವೇರಿ ಜಿಲ್ಲೆ, ಬಂಧಿತ ಆರೋಪಿಗಳಾಗಿದ್ದಾರೆ.
 ಬಂದಿತರಿಂದ : ಒಟ್ಟು ಅಂದಾಜು  ರೂ  2,00,000/- ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 31-05-2024ರಂದು ಬಂಕಾಪುರ ಠಾಣೆ ಸಬ್ ಇನ್ಸ್ಪೆಕ್ಟರ್  ಶರಣಪ್ಪ ಹಂಡ್ರಗಲ್ ಮತ್ತವರ ಸಿಬ್ಬಂದಿಯವರು, ಬಂಕಾಪುರ್ ಹಾವೇರಿ ರಸ್ತೆಯಲ್ಲಿ ಕರ್ತವ್ಯದಲ್ಲಿ ಇದ್ದರು. ಆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಅನುಮಾನಾಸ್ಪದವಾಗಿ ಕಂಡುಬಂದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದಾರೆ. 
ಬಂಧಿತರು : ದ್ವಿಚಕ್ರ ವಾಹನಗಳನ್ನು ಹಾವೇರಿ,ಮುಂಡುಗೋಡ್, ಶಿರಸಿ ಮತ್ತು ಹಾನಗಲ್ ನಲ್ಲಿ ಕಳ್ಳತನ ಮಾಡಿ ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದರು. ಹಾಗೆ ಕದ್ದ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಕರ್ತವ್ಯದಲ್ಲಿದ್ದ ಬಂಕಾಪುರ ಠಾಣೆ  ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
 ಹಾವೇರಿ ಜಿಲ್ಲೆ ಎಸ್ಪಿ ಅಂಶುಕುಮಾರ್, ಅಡಿಷನಲ್ ಎಸ್ ಪಿ ಗೋಪಾಲ್ ಮತ್ತು ಶಿಗ್ಗಾವಿ ಉಪ ವಿಭಾಗದ ಡಿವೈಎಸ್ಪಿ ಜಿ ಮಂಜುನಾಥ್ ರವರುಗಳ ಮಾರ್ಗದರ್ಶನ, ಶಿಗ್ಗಾವಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಶ್ರೀದೇವಿ ಎ. ಪಾಟೀಲ್ ರವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ :ಬಂಕಾಪುರ್ ಠಾಣೆ ಸಬ್ ಇನ್ಸ್ಪೆಕ್ಟರ್ ಶರಣಪ್ಪ ಹಂಡ್ರಗಲ್ ಹಾಗೂ ಸಿಬ್ಬಂದಿಯವರಾದ ಜಿ ಎಮ್ ಲಮಾಣಿ, ಎಚ್ ನದಾಫ್, ಎಸ್ ಸಿ ಕುರುಬರ, ಏ ಕೆ ನದಾಫ್, ಎನ್ಎಂ ಪೂಜಾರ್, ಶ್ರೀಕಾಂತ್ ಹುಚ್ಚನಗೌಡ್ರ್, ಜಬಿವುಲ್ಲಾ ದೊಡ್ಮನಿ, ಜಿ ಎನ್ ಹರಿಜನ್ ಮತ್ತು ಎಸ್ ಸಿ ದೇವಸುರ್ ಪಾಲ್ಗೊಂಡಿದ್ದರು.
 ವರದಿ: ನಿಂಗರಾಜ್ ಕೂಡಲ್ 
 ಹಾವೇರಿ ಜಿಲ್ಲೆ (ಬಂಕಾಪುರ )
		 
                         
                         
                         
                         
                         
                         
                         
                         
                         
                        