POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬಂಕಾಪುರ ಪುರಸಭೆ ಕಛೇರಿಯಲ್ಲಿ ಶ್ವಾನ ಕಾಟ – ಸಾರ್ವಜನಿಕರ ಆಕ್ರೋಶ | Bankapura

ಬಂಕಾಪುರ ಪುರಸಭೆ ಕಛೇರಿಯಲ್ಲಿ ಶ್ವಾನ ಕಾಟ – ಸಾರ್ವಜನಿಕರ ಆಕ್ರೋಶ | Bankapura

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಕಛೇರಿಯಲ್ಲಿ ಶ್ವಾನಗಳ ಕಾಟಕ್ಕೆ  ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. 

ಕಛೇರಿಗೆ ಕಾರ್ಯ ನಿಮಿತ್ತ ಬರುವ ಜನಸಾಮಾನ್ಯರಿಗೆ ಶ್ವಾನಗಳಿಂದ ತೊಂದರೆಯುಂಟಾಗುತಿದ್ದು ಈ ಬಗ್ಗೆ ಹಲವಾರು ಬಾರಿ ಬಂಕಾಪುರ ಪುರಸಭೆಗೆ ಸಾರ್ವಜನಿಕರೆಲ್ಲರೂ ಸೇರಿಕೊಂಡು ಶ್ವಾನಗಳನ್ನು  ಹಿಡಿದು ಬೇರೆ ಕಡೆ ಸ್ಥಳಾಂತರಿಸಿ ಎಂದು  ಮನವಿಯನ್ನು ಸಲ್ಲಿಸಿದ್ದಾರೆ. 

ಆದರೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷತೆಯಿಂದ ಸಾರ್ವಜನಿಕರಿಗೆ ಹಲವಾರು ರೀತಿಯಿಂದ ತೊಂದರೆಯನ್ನು ಮಾಡಿವೆ. ಕೆಲ ಜನರಿಗೆ ಶ್ವಾನ ಕಡಿದಿದೆ ಎನ್ನಲಾಗುತಿದ್ದು ಜನ ಸಾಮಾನ್ಯರು ಓಡಾಡಲು ತೊಂದರೆಯಾಗಿದೆ. ಜನರು ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.  

ಒಟ್ಟಾರೆಯಾಗಿ ಜನ ಸಾಮಾನ್ಯರು ನಿರ್ಭೀತಿಯಿಂದ ಬರಬೇಕಾದ ಸರ್ಕಾರಿ ಕಛೇರಿಗಳ ಪರಿಸ್ಥಿತಿಯೇ ಹೀಗಾದರೇ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಾರೋ ಕಾದು ನೋಡಬೇಕಾಗಿದೆ.

ವರದಿ  : ನಿಂಗರಾಜ ಕೂಡಲ್ 
ಬಂಕಾಪುರ್ ( ಹಾವೇರಿ ಜಿಲ್ಲೆ)

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.