ಕಾನೂನುಬಾಹಿರ ಅಮದು ತಡೆದರೇ ಅಡಿಕೆಗೆ ಉತ್ತಮ ಧಾರಣೆ ಸದಾ ಇರುತ್ತದೆ – ಕಿಶೋರ್ ಕುಮಾರ್ | Campco

ಕಾನೂನುಬಾಹಿರ ಅಮದು ತಡೆದರೇ ಅಡಿಕೆಗೆ ಉತ್ತಮ ಧಾರಣೆ ಸದಾ ಇರುತ್ತದೆ – ಕಿಶೋರ್ ಕುಮಾರ್ | Campco

ಕ್ಯಾಂಪ್ಕೋ ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳ ಮಾರಾಟ ಮಳಿಗೆ ಉದ್ಘಾಟನೆ | Arecanut

ರಿಪ್ಪನ್‌ಪೇಟೆ: ದೇಶದಲ್ಲಿ ಅಡಿಕೆ ಕಾನೂನು ಬಾಹಿರ ಆಮದು ನಡೆಯುತ್ತಿದೆ. ಅದನ್ನು ತಡೆಗಟ್ಟಿದರೆ ರೈತರ ಅಡಿಕೆಗೆ ಉತ್ತಮ ಧಾರಣೆ ಸದಾ ದೊರೆಯುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಪಟ್ಟಣದಲ್ಲಿ ಕ್ಯಾಂಪ್ಕೋ ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳ ಮಾರಾಟ ಮಳಿಗೆಯನ್ನು ಉದ್ಘಾಟನೆ ನೆರವೇರಿಸಿ ನಂತರ ಸದಸ್ಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಕ್ಯಾಂಪ್ಕೊ ಮತ್ತಿತರ ಸಹಕಾರ ಸಂಘಗಳ ಹೋರಾಟದ ಫಲವಾಗಿ ಹೊರದೇಶಗಳಿಂದ ಭಾರತಕ್ಕೆ ಆಮದಾಗಿರುತ್ತಿರುವ ಅಡಿಕೆಗೆ ಮುನ್ನೂರೈವತ್ತು ಸುಂಕವನ್ನು ವಿಧಿಸಿರುವ ಪರಿಣಾಮ ಅಡಿಕೆ ಬೆಳೆಗಾರರಿಗೆ ಪ್ರಸ್ತುತ ಸಾಲಿನಲ್ಲಿ ಉತ್ತಮ ದರ ದೊರೆಯುತ್ತಿದೆ.


 ಮತ್ತೊಮ್ಮೆ ಸಹಕಾರಿ ಮುಖಂಡರುಗಳು ದೆಹಲಿಗೆ ತೆರಳಿ ಮುಂದಿನ ಸಾಲಿನಲ್ಲಿ ಈಗಿರುವ ದರಕ್ಕಿಂತ ಕಡಿಮೆ ಸುಂಕವನ್ನು ವಿಧಿಸಬಾರದು ಎಂಬ ಒತ್ತಡವನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇವೆ. ಆ ಮೂಲಕ ರೈತರ ಹಿತಕಾಪಾಡುವಲ್ಲಿ ಕ್ಯಾಂಪ್ಕೊ ಸಂಸ್ಥೆ 50 ವರ್ಷಗಳಿಂದ ಶ್ರಮಿಸುತ್ತಿದೆ. ರೈತರು ನಮ್ಮ ಸಂಸ್ಥೆಯಲ್ಲಿ ಹೆಚ್ಚುಹೆಚ್ಚು ವ್ಯಾಪಾರ ವಹಿವಟು ಮಾಡಿದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಸಹಕಾರಿ ಸಂಸ್ಥೆಗಳು ಆರ್ಥಿಕವಹಿವಾಟಿನಲ್ಲಿ ಕ್ಷೀಣವಾದರೆ ಖಾಸಗಿಯವರು ಏಕಸ್ವಾಮ್ಯ ಸಾಧಿಸುವ ಅಪಾಯವಿರುತ್ತದೆ.  ಆದ್ದರಿಂದ ಸಹಕಾರಿ ಸಂಸ್ಥೆಗಳಲ್ಲಿ ವ್ಯಾಪಾರಮಾಡುವುದು ಉತ್ತಮವಾಗಿದೆ. ಅಡಿಕೆ ಉತ್ತಮ ದರವಿದ್ದು ಇದು ನಿರಂತರವಾದರೆ ರೈತರ ಕುಟುಂಬಗಳಿಗೆ ಆಧಾರವಾಗುತ್ತದೆ. 


ಅಡಿಕೆಗೆ ಬೇಕಾದ ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳನ್ನು ಕ್ಯಾಂಪ್ಕೊವತಿಯಿಂದಲೇ ತಯಾರು ಮಾಡುತ್ತಿದ್ದು ಕೈಗೆಟಕುವ ದರದಲ್ಲಿ ಮಾರಾಟಮಾಡಲಾಗುತ್ತಿದೆ. ರಿಪ್ಪನ್‌ಪೇಟೆಯಲ್ಲಿಯೂ ಕ್ಯಾಂಪ್ಕೊ ಸಂಸ್ಥೆಯ ಉತ್ಪನ್ನಗಳು ಜೆಕೆ ಟ್ರೇಡರ್ಸ್ ನಲ್ಲಿ ದೊರೆಯುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಎಂ. ಪರಮೇಶ್, ಸಹಕಾರಿ ಧುರೀಣರಾದ ರವಿ, ಚಂದ್ರೇಗೌಡ, ಶಂಕರನಾರಾಯಣ ಭಟ್, ಅವುಕ ರಾಘವೇಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ, ಮಾರಾಟ ಮಳಿಗೆಯ ಸುಧಾಕರ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *