POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಅಬ್ಬರಿಸಿ ಬೊಬ್ಬಿರಿದರೇ ಇಲ್ಯಾರಿಗೂ ಭಯವಿಲ್ಲ | ಶಿವಣ್ಣ ಅಭಿಮಾನಿಗಳಿಂದ ಮನೆ ಮೇಲೆ ಮುತ್ತಿಗೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮೂಲಕ ಟಾಂಗ್ ಕೊಟ್ಟ ಕುಮಾರ್ ಬಂಗಾರಪ್ಪ | shivanna-kumar

ಅಬ್ಬರಿಸಿ ಬೊಬ್ಬಿರಿದರೇ ಇಲ್ಯಾರಿಗೂ ಭಯವಿಲ್ಲ | ಶಿವಣ್ಣ ಅಭಿಮಾನಿಗಳಿಂದ ಮನೆ ಮೇಲೆ ಮುತ್ತಿಗೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮೂಲಕ ಟಾಂಗ್ ಕೊಟ್ಟ ಕುಮಾರ್ ಬಂಗಾರಪ್ಪ | shivanna-kumar
ಚಲನಚಿತ್ರ ನಟ ಶಿವರಾಜ್ ಕುಮಾರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆಂದು ಶಿವಣ್ಣ ಅಭಿಮಾನಿಗಳು ಬೆಂಗಳೂರಿನಲ್ಲಿರುವ ಮಾಜಿ ಸಚಿವ‌ ಕುಮಾರ್ ಬಂಗಾರಪ್ಪನವರ ಮನೆ ಮೇಲೆ ಮುತ್ತಿಗೆ ಹಾಕಿರುವ ಬೆನ್ನಲ್ಲೇ ಕುಮಾರ್ ಬಂಗಾರಪ್ಪ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ ರವರಿಗೆ ಎಕ್ಸ್ ಖಾತೆ ಮತ್ತು ಫೇಸ್ ಬುಕ್ ನಲ್ಲಿ ಅಭಿನಂದನೆ ಸಲ್ಲಿಸಲು ಪೋಸ್ಟ್ ಹಾಕಿರುವ ಕುಮಾರ್ ಬಂಗಾರಪ್ಪ ಅದಕ್ಕೆ ಒಂದಿಷ್ಟು ಮುಂಬರಹ ಸೇರಿಸಿ ಟಾಂಗ್ ಕೊಟ್ಟಿದ್ದಾರೆ.
ಸಹೋದರಿ ಗೀತಾ ಶಿವರಾಜ್ ಕುಮಾರ್, ಭಾವ ಡಾ.ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪನವರಿಗೆ ಟಾಂಗ್ ನೀಡಿ ಪೋಸ್ಟ್ ಮಾಡಿದ್ದರೂ ಮೂವರ ಹೆಸರು ಬಳಕೆ ಮಾಡಿಕೊಂಡಿಲ್ಲ. ಯಾರ ಹೆಸರು ಹೇಳದೆ ಇರುವುದರಿಂದ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಗಳು ಕುತೂಹಲ ಮೂಡಿಸಿದೆ.
ಪೋಸ್ಟ್ ನಲ್ಲೇನಿದೆ..??
ಬಬ್ರುವಾಹನ: ಅಬ್ಬರಿಸಿ ಬೊಬ್ಬರಿದರೆ ಇಲ್ಲಿ ಯಾರಿಗೂ ಭಯವಿಲ್ಲ ಎಂಬ ಪೋಸ್ಟ್ ನ ಹೆಡ್ ಲೈನ್ ಮತ್ತು ಬಿ.ವೈ.ಆರ್ ಅವರಿಗೆ ಹೃದಯ ಪೂರಕ ಅಭಿನಂದನೆಯ ಪೋಸ್ಟ್ ಮೇಲುಗಡೆ, ‘ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನೇ ಇದ್ದರು‌ ಗಂಟಲಿನ‌ ಒಳಗೆ, ನಾಲ್ಕು ಗೋಡೆಗಳ ಒಳಗೆ, ತಮ್ಮ‌ಪಟಾಲಂಗಳ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು.
ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು ಎಂದು ಎಕ್ಸ್  ಮತ್ತು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.