January 11, 2026

ಅಕ್ರಮವಾಗಿ ಸಾಗಿಸುತಿದ್ದ 23 ಗೋವುಗಳನ್ನು ರಕ್ಷಿಸಿದ ಪೊಲೀಸರು

ಅಕ್ರಮವಾಗಿ ಸಾಗಿಸುತಿದ್ದ 23 ಗೋವುಗಳನ್ನು ರಕ್ಷಿಸಿದ ಪೊಲೀಸರು 

ತೀರ್ಥಹಳ್ಳಿ:  ಅಕ್ರಮ ಗೋವುಗಳ ಸಾಕಾಣಿಕೆ ಮಾಡುತಿದ್ದ ಅಡ್ದೇ ಮೇಲೆ ಮಾಳೂರು ಪೊಲೀಸರು ದಾಳಿ ನಡೆಸಿ 23 ಗೋವುಗಳ ರಕ್ಷಣೆ ಮಾಡಿದ್ದಾರೆ.

ಮಂಡಗದ್ದೆಯಲ್ಲಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 23 ಗೋವುಗಳನ್ನ ರಕ್ಷಣೆ ಮಾಡಲಾಗಿದ್ದು ಗೋವುಗಳನ್ನು ಏಕಕಾಲದಲ್ಲಿ ಮಂಡಗದ್ದೆಯ ಝಬಿ ಎಂಬುವನ ಕೊಟ್ಟಿಗೆಯಲ್ಲಿದ್ದಾಗಲೇ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ಶಿವಾನಂದ್ ನೇತ್ರತ್ವದ ತಂಡ 23 ಗೋವುಗಳನ್ನು ರಕ್ಷಣೆ ಮಾಡಿದೆ.

ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಗಂಡುಕರು, ಗೊಡ್ಡು ದನಗಳನ್ನು ಮಠಗಳಿಗೆ ಗೋಶಾಲೆಗೆ ಬಿಡುವುದಾಗಿ ಹೇಳಿ ಮನೆಯವರನ್ನು ನಂಬಿಸಿ, ಗೋವುಗಳನ್ನು ಅಕ್ರಮ ಖಸಾಯಿಖಾನೆಗೆ ಸಾಗಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲಲ್ಲಿ ಸಂಗ್ರಹಿಸಿದ ಗೋವುಗಳನ್ನು ರಾತ್ರೋರಾತ್ರಿ ಒಂದೆಡೆ ಸೇರಿಸಿ ಮಂಡಗದ್ದೆಯ ಜಂಕ್ಷನ್ ಪಾಯಿಂಟ್ ನಿಂದ ಕೌ ಸ್ಲಾಟರ್ ಗೆ ಡೆಲವರಿ ಮಾಡುವ ದೊಡ್ಡ ಜಾಲವೇ ಮಲೆನಾಡಿನಲ್ಲಿ ಸಕ್ರೀಯವಾಗಿದೆ. 

ಗೋ ಕಳ್ಳರ ಜಾಲವನ್ನು ಪತ್ತೆಹಚ್ಚಿದ ಮಾಳೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ದಂಧೆಯ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ. 

ರಕ್ಷಿಸಿದ ಗೋವುಗಳನ್ನು ಗೋಶಾಲೆಗೆ ಕಳುಹಿಸಿಕೊಡಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

About The Author

Leave a Reply

Your email address will not be published. Required fields are marked *