ತೆಪ್ಪ ಮುಳುಗಿ ನೀರುಪಾಲಾಗಿದ್ದ ಮೂವರು ಯುವಕರ ಮೃತದೇಹ ಪತ್ತೆ | Crime News

ತೆಪ್ಪ ಮುಳುಗಿ ನೀರುಪಾಲಾಗಿದ್ದ ಮೂವರು ಯುವಕರ ಮೃತದೇಹ ಪತ್ತೆ 

ಎನ್.ಆರ್.ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ನೀರುಪಾಲಾಗಿದ್ದ ಶಿವಮೊಗ್ಗ ಮೂಲದ ಮೂವರ ಮೃತದೇಹ ಗುರುವಾರ ಪತ್ತೆಯಾಗಿದೆ.

ಮೃತರನ್ನು ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ನಿವಾಸಿಗಳಾದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಎಂದು ಗುರುತಿಸಲಾಗಿದೆ.

ಬುಧವಾರ ಶಿವಮೊಗ್ಗದ ವಿದ್ಯಾನಗರದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು ಜಿಲ್ಲೆಯ ಬೈರಾಪುರದಲ್ಲಿರುವ ಭದ್ರಾ ಹಿನ್ನೀರಿನ ಬಳಿ ಬಂದಿದ್ದಾರೆ, ಈ ವೇಳೆ ನಾಲ್ವರಲ್ಲಿ ಮೂವರು ತೆಪ್ಪದಲ್ಲಿ ತೆರಳಿದ್ದಾರೆ ಓರ್ವ ಮಾತ್ರ ದಡದಲ್ಲಿ ನಿಂತಿದ್ದ ಎನ್ನಲಾಗಿದೆ ತೆಪ್ಪದಲ್ಲಿ ತೆರಳಿದ ಕೆಲವೇ ಹೊತ್ತಿನಲ್ಲಿ ತೆಪ್ಪ ಮುಳುಗಿ ಮೂವರು ನಿರುಪಾಲಾಗಿದ್ದರು, ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತ ಮೂವರು ನೀರು ಪಾಲಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಆದರೆ ಕತ್ತಲಾದರೂ ಮೂವರ ದೇಹಗಳು ಪತ್ತೆಯಾಗಲಿಲ್ಲ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿ ಗುರುವಾರ ಮತ್ತೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬಂದಿಗಳು ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.

ಮೃತದೇಹಗಳನ್ನು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಶವಗಾರಕ್ಕೆ ರವಾನೆ ಮಾಡಲಾಗಿದೆ.

Leave a Reply

Your email address will not be published. Required fields are marked *