ಜೈಲು ಕಂಬಿಯ ಹಿಂದೆ ಅಡಗಿ ಕುಳಿತ ನಾಗರಹಾವು – ತಪ್ಪು ಮಾಡದೇ ಇದ್ದರೂ ನಾಗರಾಜ ಜೈಲು ಸೇರಿದ್ಯಾಕೆ..!??#snakerescue
ವಾಹನಗಳಲ್ಲಿ ಮನೆಗಳಿಗೆ ಹಾವುಗಳು ನುಗ್ಗಿರೋದನ್ನು ನೋಡಿದಿದ್ದೇವೆ ಆದರೆ ಶಿವಮೊಗ್ಗದ ಜೈಲಿಗೆ ನಾಗರಹಾವೊಂದು ನುಗ್ಗಿ ಜೈಲು ಕಂಬಿಯ ಹಿಂದೆ ಅಡಗಿ ಕುಳಿತ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಹಾವು ನುಗ್ಗಿದೆ. ಹಾವನ್ನು ಗಮನಿಸಿದ ಜೈಲಿನ ಸಿಬ್ಬಂದಿ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಠಾಣಾ ಸಿಬ್ಬಂದಿಯ ಚಲನವಲನ ನೋಡಿ ಹೆದರಿದ ನಾಗಪ್ಪ ನೇರವಾಗಿ ಜೈಲಿನ ಕೋಣೆಯ ಬಾಗಿಲನ್ನು ಏರಿ ಕುಳಿತಿತ್ತು. ಕಂಬಿಯ ಹಿಂದೆ ಅಡಗಿ ಕುಳಿತಿದ್ದ ಹಾವನ್ನು ರಕ್ಷಿಸಲಾಗಿದೆ.
ಕೂಡಲೇ ಉರಗ ತಜ್ಞ ಸ್ನೇಕ್ ಕಿರಣ್ ಕರೆಮಾಡಿ ವಿಷಯ ತಿಳಿಸಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹಾವನ್ನು ರಕ್ಷಣೆ ಮಾಡಿ ಸೂಕ್ತ ಸ್ಥಳಕ್ಕೆ ಬಿಡಲಾಗಿದೆ.
 
                         
                         
                         
                         
                         
                         
                         
                         
                         
                        