Arasalu | ಜಮೀನಿಗೆ ತೆರಳುವ ರಸ್ತೆಗೆ ಅಡ್ಡಿ – ತೆರವುಗೊಳಿಸುವಂತೆ ರೈತರಿಂದ ಮನವಿ
ಹೊಸನಗರ : ಖಾಸಗಿ ವ್ಯಕ್ತಿಗಳು ರೈತರು ಜಮೀನುಗಳಿಗೆ ಹೋಗುವ ದಾರಿಗೆ ಬೇಲಿಯನ್ನು ಕಟ್ಟಿ ತೊಂದರೆ ಮಾಡಿದ್ದು ಸದರಿ ಬೇಲಿ ತೆರವುಗೊಳಿಸಿ ವ್ಯವಸಾಯ ಮಾಡಲು ಅನುವು ಮಾಡಿ ಕೊಡಬೇಕೆಂದು ಅರಸಾಳು ಗ್ರಾಮದ ರೈತರು ಹೊಸನಗರದ ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ರವರಿಗೆ ಮನವಿ ಸಲ್ಲಿಸಿದರು.
ಅರಸಾಳು ಗ್ರಾಮದ ಸರ್ವೆ ನಂ. 5 ರಿಂದ 16, 8, 11 ರ ಮುಖಾಂತರ ಬೆನವಳ್ಳಿಗೆ ಹೋಗುವ ನಕಾಶೆ ಕಂಡ ದಾರಿ ಹಾಗೂ ಗ್ರಾಮಠಾಣ ಜಾಗದಲ್ಲಿ ಸರ್ವೆ ನಂ. 5 ರಿಂದ ಒತ್ತುವರಿಮಾಡಿ ಬೇಲಿಕಟ್ಟಿದ್ದು, ಸರ್ವೆ ನಂ. 4, 3, 2, 1 ರ ಖಾತೆದಾರರ ಜಮೀನಿಗೆ ಹೋಗುವ ದಾರಿಯನ್ನು ಖಾಸಗಿ ವ್ಯಕ್ತಿಗಳು ಬೇಲಿಕಟ್ಟಿ ಗ್ರಾಮಠಾಣ ಮತ್ತು ನಕಾಶೆ ಕಂಡ ಎರಡೂ ದಾರಿಯನ್ನು ಬೇಲಿಕಟ್ಟಿ ಅಡ್ಡಿಪಡಿಸಿರುತ್ತಾರೆ.
ಈ ಬಗ್ಗೆ ಸಂಬಂಧಪಟ್ಟ ತಮ್ಮ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿರುತ್ತೇವೆ. ಹಾಗೂ ಪಂಚಾಯ್ತಿಯ ಗ್ರಾಮ ಠಾಣಾ ದಾರಿಯನ್ನು ತೆರವುಗೊಳಿಸಲು ಹಲವಾರು ಬಾರಿ ಮನವಿಯನ್ನು ಮಾಡಿದ್ದು ಯಾವುದೇ ಪ್ರಯೋಜನವಾಗಿರುವುದಿಲ್ಲ ಹಾಗಾಗಿ ಕೂಡಲೇ ಜಮೀನಿಗೆ ಅಡ್ಡ ಕಟ್ಟಿರುವ ಬೇಲಿಯನ್ನು ತೆರವುಗೊಳಿಸಿ ಕೊಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ರಮೇಶ್ ಅರಸಾಳು , ಸುಬ್ಬೋಜಿ , ಗುರುರಾಜ್ ಸೇರಿದಂತೆ ಅನೇಕ ರೈತರು ಇದ್ದರು.