ಹೊಸನಗರ , ರಿಪ್ಪನ್‌ಪೇಟೆ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮದ ಶಾಲಾ ಪ್ರಾರಂಭೋತ್ಸವ | School opening celebration
ಹೊಸನಗರ ಪಟ್ಟಣ ,ರಿಪ್ಪನ್‌ಪೇಟೆ ,ಹಡ್ಲುಬೈಲ್ ಹಾಗೂ ಚಿಕ್ಕಜೇನಿ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಶಾಲಾ ಪ್ರಾರಂಭೋತ್ಸವ ನಡೆಯಿತು.
ಆವರಣವನ್ನು ಸ್ವಚ್ಛಗೊಳಿಸಿ ತಳಿರ ತೋರಣ ಹೂವುಗಳನ್ನು ಕಟ್ಟಿ ಶಾಲಾ ಪ್ರಾರಂಭೋತ್ಸವಕ್ಕೆ ಮೆರುಗು ನೀಡಲಾಗಿತ್ತು.ವಿದ್ಯಾರ್ಥಿಗಳಿಗೆ ಹೂವು ನೀಡಿ ಶಾಲೆಗೆ ಸ್ವಾಗತಿಸಲಾಯಿತು.
ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಮೂರ್ತಿ ಹೆಚ್ ಆರ್ ಮಕ್ಕಳಿಗೆ ಹೂಗುಚ್ಛ ನೀಡುವ ಮೂಲಕ ಮಕ್ಕಳನ್ನು ಬರಮಾಡಿಕೊಂಡರು.
ಇದೇ ಸಂಧರ್ಭದಲ್ಲಿ ತಾಲೂಕು ಶಿಕ್ಷಣ ಸಮನ್ವಯ ಅಧಿಕಾರಿಯಾದ ಕರಿಬಸಪ್ಪ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಂಜಪ್ಪ ಬಿ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥವರು ಶಾಲಾ ಮುಖ್ಯ ಶಿಕ್ಷಕರಾದ ರೇಣುಕಪ್ಪ ಹಾಗೂ ಸಹ ಶಿಕ್ಷಕರುಗಳು ಎಸ್ ಡಿ ಎಂಸಿ ಸದಸ್ಯರುಗಳು ಮತ್ತು ಪೋಷಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಿಪ್ಪನ್‌ಪೇಟೆಯ ಸರ್ಕಾರಿ ಪ್ರೌಡಶಾಲೆಯಲ್ಲಿ ಸಂಭ್ರಮದ ಪ್ರಾರಂಭೋತ್ಸವ:
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಹೂವು ನೀಡುವುದರ ಮೂಲಕ ಸ್ವಾಗತಿಸಲಾಯಿತು.ಈ ಸಂಧರ್ಭದಲ್ಲಿ SDMC ಅಧ್ಯಕ್ಷರು, ಸದಸ್ಯರು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಇದ್ದರು.
ಹೊಸನಗರ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ :
ಹೊಸನಗರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಇದೇ ವೇಳೆ ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲೆಗಳಲ್ಲಿ ಸಿಹಿ ಹಾಗೂ ಪಾಯಸಗಳನ್ನು ಮಕ್ಕಳಿಗೆ ಪೋಷಕರಿಗೆ ಶಾಲಾ ಅಭಿವೃದ್ಧಿ ಸಮಿತಿಯವರಿಗೆ ಶಿಕ್ಷಕ ವೃಂದದವರು ವಿತರಿಸಿ ಸಂಭ್ರಮಿಸಿದರು.
ಚಿಕ್ಕಜೇನಿ ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಚಿಕ್ಕಜೇನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಬೇಸಿಗೆ ರಜೆಯನ್ನು ಮುಗಿಸಿ ಶಾಲೆ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮುಂದಿನ ತರಗತಿಯ ಕೊಠಡಿಯಲ್ಲಿ ತಮ್ಮ ಆಸನವನ್ನು ಅಲಂಕರಿಸಿ ತಮ್ಮ ರಜಾ ದಿನದಲ್ಲಿ ಮದುವೆಮನೆ, ಅಜ್ಜ-ಅಜ್ಜಿ, ಸಂಬಂಧಿಕರ ಮನೆಗಳಲ್ಲಿಗೆ ಹೋಗಿ ಕಳೆದ ದಿನಗಳನ್ನು ಮೇಲಕು ಹಾಕುತ್ತಿದುದ್ದು ವಿಶೇಷವಾಗಿತ್ತು.
ಚಿಕ್ಕಜೇನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಸಹ ಶಿಕ್ಷಕಿಯರಾದ ಅನಿತಾ, ಕು.ಕಾವ್ಯ ಇನ್ನಿತರರು ಹಾಜರಿದ್ದರು.
ತಾಲೂಕಿನಾದ್ಯಂತ ಶಾಲೆ ಪ್ರಾರಂಭೋತ್ಸವ ಸಂಭ್ರಮ
ಇನ್ನೂ ಶಾಲೆಗಳಲ್ಲಿ ಸಿಹಿ ಹಾಗೂ ಪಾಯಸಗಳನ್ನು ಮಕ್ಕಳಿಗೆ, ಪೋಷಕರಿಗೆ, ಶಾಲಾ ಅಭಿವೃದ್ಧಿ ಸಮಿತಿಯವರಿಗೆ ಶಿಕ್ಷಕ ವೃಂದದವರು ವಿತರಿಸಿ ಸಂಭ್ರಮಿಸಿದರು.
ಆರಂಭದ ದಿನ ಮಕ್ಕಳಿಗೆ ಶಿಕ್ಷಕರು ಪಾಠ ಪ್ರವಚನ ಮಾಡದೇ ಸಂತೋಷದಿಂದ ಕಾಲಕಳೆಯುವಂತೆ ಬಿಟ್ಟಿರುವುದು ಇನ್ನೊಂದು ಸಂತಸದ ಸಂಗತಿಯಾಗಿತು.
ಒಟ್ಟಾರೆಯಾಗಿ ಇನ್ನೂ 15 ದಿನ ರಜೆ ಇದ್ದಿದ್ದರೆ ಇನ್ನೂ ಕುಣಿದು ಕುಪ್ಪಳಿಸುತ್ತಿದ್ದವು ಎಂದು ಹಲವು ವಿದ್ಯಾರ್ಥಿಗಳು ತಮ್ಮ ರಜಾ ದಿನದ ಅನುಭವವನ್ನು ಮಾಧ್ಯಮದವರ ಬಳಿ ಹಂಚಿಕೊಂಡರು.
ಹೊಸನಗರ ತಾಲೂಕಿನ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.