Sagara | ಸರ್ಕಾರಿ ಆಸ್ಪತ್ರೆಯ ವೈದ್ಯರ ಯಶಸ್ವಿ ಶಸ್ತಚಿಕಿತ್ಸೆ – ಗರ್ಭಕೋಶದಿಂದ 7 ಕೆಜಿ ಗೆಡ್ಡೆ ಹೊರತೆಗೆದ ವೈದ್ಯರು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಬರೋಬ್ಬರಿ 7 ಕೆಜಿ ತೂಕದ ಗಡ್ಡೆಯನ್ನು ಆಕೆಯ ಹೊಟ್ಟೆಯಿಂದ ಹೊರತೆಗೆದಿದ್ದಾರೆ
ಸಾಗರ ತಾಲ್ಲೂಕಿನ ನ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 7 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಬುಧವಾರ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಹೊಸನಗರ ತಾಲ್ಲೂಕಿನ ಜಯನಗರ ಗ್ರಾಮದ ನಿವಾಸಿಯೊಬ್ಬರು ಕೆಲ ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಅವರನ್ನ ಈಚೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದನ್ನು ಗುರುತಿಸಿದ್ದರು.
ಬುಧವಾರ ವೈದ್ಯರಾದ ನಾಗೇಂದ್ರಪ್ಪ, ಪ್ರತಿಮಾ, ಶರ್ಮಿತಾ, ಬಿ.ಜಿ.ಸಂಗಮ್, ರಾಜೇಶ್, ಶುಶ್ರೂಷಕಿಯರಾದ ಸುವರ್ಣ, ಶ್ವೇತಾ, ಆಲಿಯಾ, ಚಂದ್ರು, ರಾಕೇಶ್ ಅವರನ್ನೊಳಗೊಂಡ ತಂಡ 2 ಗಂಟೆಗೂ ಹೆಚ್ಚು ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರಕ್ಕೆ ತೆಗೆದಿದೆ. ಶಸ್ತ್ರ ಚಿಕಿತ್ಸೆಯ ನಂತರ ಮಹಿಳೆ ಆರೋಗ್ಯವಾಗಿದ್ದಾರೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪರಪ್ಪ ತಿಳಿಸಿದ್ದಾರೆ.