Ripponpete | ಬಾರ್ ಮುಂಭಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ – ಸಂಚಾರಕ್ಕೆ ಅಡೆತಡೆ
#ಜನಹಿತಕ್ಕಾಗಿ
ರಿಪ್ಪನ್‌ಪೇಟೆ: ಪಟ್ಟಣ ಈಗ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗಿರುವ ಕಾರಣ ವ್ಯಾಪಾರ ವಹಿವಾಟು ಹೆಚ್ಚಾಗಿವೆ. ಇದರ ಜತೆ ವಾಹನ ಸಂಚಾರವೂ ಹೆಚ್ಚಾಗಿದೆ. ಚಿಕ್ಕ ರಸ್ತೆಯಲ್ಲೇ ದೊಡ್ಡ ದೊಡ್ಡ ವಾಹನ ಸಂಚಾರ ಜೋರಾಗಿದೆ ಈ ನಡುವೆ ತೀರ್ಥಹಳ್ಳಿ ರಸ್ತೆಯಲ್ಲಂತೂ ಅಸಮರ್ಪಕ ವಾಹನ ನಿಲುಗಡೆಯಿಂದ ಜನ ತತ್ತರಿಸುವಂತಾಗಿದೆ.
ಹೌದು ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರು ಖಾಸಗಿ ಬಾರ್ ಮುಂಭಾಗದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದರಿಂದ ತೀರ್ಥಹಳ್ಳಿ ರಸ್ತೆಯಲ್ಲಿ ಟಾಫಿಕ್ ನದ್ದೆ ದೊಡ್ಡ ಸಮಸ್ಯೆಯಾಗಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ವ್ಯಾಪಾರಸ್ಥರಿಗೆ, ಪ್ರಯಾಣಿಕರು ರಸ್ತೆ ಸಂಚಾರ ಒತ್ತಡದಲ್ಲಿ ನಲುಗಿ ಹೋಗಿದ್ದಾರೆ.ಇನ್ನೂ ಮಹಿಳೆಯರು ಮಕ್ಕಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವಾವ ವಾಹನ ಎಲ್ಲಿಂದ ಡಿಕ್ಕಿ ಹೊಡೆಯತ್ತೋ ಎಂದು ಭಯ ಪಡುತ್ತಾ ಸಂಚರಿಸುವ ವಾತವರಣ ನಿರ್ಮಾಣವಾಗಿದೆ.
ಬಾರ್ ಗೆ ಮದ್ಯ ಖರೀದಿಸಲು ಬರುವ ಗ್ರಾಹಕರು ನಡು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ಕಾರುಗಳನ್ನು ನಿಲ್ಲಿಸುತ್ತಾರೆ ಇನ್ನೂ ಬೈಕ್ ಸವಾರರನ್ನು ಕೇಳುವರೇ ಇಲ್ಲದಿದ್ದರಿಂದ ಅಡ್ಡಾದಿಡ್ಡಿಯಾಗಿ ನಡು ರಸ್ತೆಯಲ್ಲಿ ನಿಲ್ಲಿಸಿದರೂ ಯಾರು ಕೇಳುವುದಿಲ್ಲ.ಒಂದೊಮ್ಮೆ ಕೇಳಿದರೇ ಧಿಮಾಕಿನ ಉತ್ತರವೇ ಆ ಕಡೆಯಿಂದ ಬರುತ್ತದೆ.
ಸಂಬಂಧಪಟ್ಟವರು ಈ ಬಗ್ಗೆ ನಿರ್ಲಕ್ಷ ವಹಿಸಿರುವುದು ಸಾರ್ವಜನಿಕರಿಗೆ ಸಂಕಷ್ಟವುಂಟುಮಾಡಿದೆ. ಇನ್ನಾದರೂ ತೀರ್ಥಹಳ್ಳಿ ರಸ್ತೆಯಲ್ಲಿ ಅಡ್ಡಾ-ದಿಡ್ಡಿಯಾಗಿ ನಿಲ್ಲಿಸುವ ವಾಹನಗಳಿಗೆ ಕಡಿವಾಣ ಹಾಕಬೇಕಿದೆ. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕಿದೆ.