Konanduru | ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದು ವ್ಯಕ್ತಿ ಸಾವು
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ತೊರೆಬೈಲು ಗ್ರಾಮದಲ್ಲಿ ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ.
ಸಂಪಗಾರಿನ ಜಯಂತ್ ಭಟ್ (64) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಕೋಣಂದೂರಿನಿಂದ ತೊರೆಬೈಲು ಗ್ರಾಮದ ಮನೆಗೆ ಹಿಂದಿರುಗುತಿದ್ದಾಗ ಭಾರಿ ಗಾಳಿ ಮಳೆಗೆ ಅಕೇಶಿಯಾ ಮರ ಬೈಕ್ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಮುಂದಿನ ಕ ಕೈಗೊಂಡಿದ್ದಾರೆ.