ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೋಟೆಬೆನ್ನೂರು ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹75 ಲಕ್ಷ ಹಣವನ್ನು ಬ್ಯಾಡಗಿ ಕ್ಷಿಪ್ರಪಡೆ ತಂಡವು ಜಪ್ತಿ ಮಾಡಿದೆ.
ಇದು ಬ್ಯಾಂಕಿನ ಹಣವಾಗಿದ್ದು, ಹಾವೇರಿಯಿಂದ ಬ್ಯಾಡಗಿಗೆ ಸಾಗಿಸಲಾಗುತ್ತಿತ್ತು.
ದಾಖಲೆಯಲ್ಲಿ ನಮೂದಿಸಿದ ವಾಹನದ ಸಂಖ್ಯೆಗೂ, ಹಣ ಸಾಗಿಸುತ್ತಿದ್ದ ವಾಹನ ಸಂಖ್ಯೆ ಬದಲಾವಣೆ ಇದ್ದ ಕಾರಣ ಹಣವನ್ನು ಮುಂದಿನ ಪರಿಶೀಲನೆಗಾಗಿ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ’ ಎಂದು ಜಿಲ್ಲಾ ಸೀಜರ್ ಕಮಿಟಿ ಅಧ್ಯಕ್ಷ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.