Haveri | ಗಾಂಜಾ ಮಾರಾಟ – ಮಾಲು ಸಮೇತ ಯುವಕನ ಬಂಧನ
ಹಾವೇರಿ : ಸವಣೂರ ಪಟ್ಟಣದ ಸವಣೂರ-ಲಕ್ಷ್ಮೀಶ್ವರ ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಮುಖ್ಯ ದ್ವಾರದ ಹೊರಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸವಣೂರು ಪಟ್ಟಣದ ಮಂಗಳವಾರ ಪೇಟೆಯ ಮಳೆಮಲ್ಲಯ್ಯ ಕನವಳ್ಳಿಮಠ (25) ಬಂಧಿತ ಆರೋಪಿ.
ಈತನಿಂದ ₹20 ಸಾವಿರ ಮೌಲ್ಯದ 1204 ಗ್ರಾಂ ಹೂವು, ಮೊಗ್ಗು ಬೀಜ ಮಿಶ್ರಿತ ಗಾಂಜಾ ಹಾಗೂ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಜಪ್ತಿ ಮಾಡಿದ್ದಾರೆ.
ಇನ್ ಸ್ಪೆಕ್ಟರ್ ಶಿವಶಂಕರ ಗಣಾಚಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.