Bankapura | ಅದ್ದೂರಿಯಾಗಿ ಜರುಗಿದ ಶ್ರೀ ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ
ಬಂಕಾಪುರ : ಭಕ್ತಿಯಿಂದ ಬರುವ ಭಕ್ತರ ಕಷ್ಟವನ್ನು ಕಳೆದು, ಇಷ್ಟಾರ್ಥಗಳನ್ನು ಈಡೇರಿಸುವ ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಬಂಕಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅಂಕದ ಕಣದ ಓಣಿಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆಗೆ ಶ್ರೀ ಸಿದ್ದಯ್ಯಸ್ವಾಮಿಗಳು ಕೆಂಡದ ಮಠ ಚಾಲನೆ ನೀಡಿದರು.
ತನ್ನ ಮಹಾ ಮಹಿಮೆಯಿಂದ ಜನರ ಮನದಲ್ಲಿ ಮನೆ ಮಾಡಿರುವ ಶ್ರೀ ಬೀರಲಿಂಗೇಶ್ವರನ ಪೌರಾಣಿಕ ಕಥೆಯಿದೆ. ಪೀಡೆ, ಪಿಶಾಚಿ, ದೆವ್ವ ಹೀಗೆ ಹಲವು ರೀತಿಯ ಸಂಕಷ್ಟ ಎದುರಿಸುವ ಭಕ್ತರಿಗೆ ಇಂದಿಗೂ ಬೀರಲಿಂಗೇಶ್ವರನ ಆಶೀರ್ವಾದವೇ ದಿವ್ಯ ಔಷಧಿಯಾಗಿದೆ. ಸಂಕಷ್ಟ ಬಂದಾಗ ಬಂಕಾಪುರ ಸೇರಿದಂತೆ ಹಾವೇರಿ, ಧಾರವಾಡ, ಕೊಪ್ಪಳ ಇತರೆ ಜಿಲ್ಲೆಗಳಿಂದ ಭಕ್ತರು ಬಂದು ಬೀರಲಿಂಗೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿ ಇಷ್ಟಾರ್ಥಗಳ ಫಲ ಪಡೆದುಕೊಳ್ಳುತ್ತಿದ್ದಾರೆ.
ವೀಡಿಯೋ ಇಲ್ಲಿ ವೀಕ್ಷಿಸಿ👇👇
ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿಯ ಹಬ್ಬದ ಪುಣ್ಯ ದಿನದಂದು ಶ್ರೀ ಬೀರೇಶ್ವರ ದೇವರನ್ನು ಮೆರವಣಿಗೆಯ ಮೂಲಕ ಹೊಳೆ ಪೂಜೆಗೆ ಹೋಗುತ್ತಾರೆ. ಪವಾಡ ಸಿದ್ದಿ ಪುರುಷ ಎನಿಸಿಕೊಂಡ ಹಾಲುಮತ ಸಮಾಜದ ಶ್ರೀ ಬೀರೇಶ್ವರ ಸ್ವಾಮಿಯು ನಂಬಿದ ಜನರಿಗೆ ವರವನ್ನು ಕೊಡುತ್ತಾನೆ.ಎಂದು ನಂಬಿಕೆ ಇಟ್ಟುಕೊಂಡು ಬಂದ ಜನರು,ಜೋಗಮ್ಮರು , ಗೊರವಯ್ಯನವರು ದೇವರ ನಾಮಗಳನ್ನು ನುಡಿಯುತ್ತಾ. ದೇವರಿಗೆ ಬಂದಂತ ಭಕ್ತರು ತಮ್ಮ ಹರಕೆ ಕೈಗೂಡಿದ ನಂತರ ಶಿರಸಾಷ್ಟಾಂಗ ನಮಸ್ಕಾರ ಮತ್ತು ಉರುಳು ಸೇವೆ, ಭಕ್ತರು ಬೇಡಿಕೊಂಡಂತೆ ಸೇವೆಯನ್ನ ಪಲ್ಲಕ್ಕಿಯ ಸುತ್ತ ಸೇವೆ ಸಲ್ಲಿಸುತ್ತಾ. ಅಂಕದಕಣದ ಓಣಿಯ ಪ್ರಮುಖ ಬೀದಿಯಲ್ಲಿ ಶ್ರೀ ಬೀರೇಶ್ವರ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಸಾಗಿತು.
ಶ್ರೀ ರೇವಣಸಿದ್ದೇಶ್ವರ ಯುವಕ ಮಂಡಲ ಸಂಘದವರು, ಶ್ರೀ ಬೀರೇಶ್ವರ ಸೇವಾ ಸಮಿತಿಯವರು ಮತ್ತು ಸಮಾಜದ ಗುರುಹಿರಿಯರು ಸೇರಿಕೊಂಡು ದೇವರ ಪಲ್ಲಕ್ಕಿಯನ್ನು ಗರ್ಭಗುಡಿ ಸೇರಿಸಿದರು.
ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳೆಲ್ಲರೂ ಹಣ್ಣು ಕಾಯಿ, ಜೋಳದ ಹಿಟ್ಟಿನ ತಣ್ಣಅಂಬಲಿ ನೈವೇದ್ಯವನ್ನು ಮಾಡಿಕೊಂಡು ಮನಶಾಂತಿಯನ್ನು ಪಡೆದರು.
ವರದಿ – ನಿಂಗರಾಜ ಕೂಡಲ ಬಂಕಾಪುರ