ರಿಪ್ಪನ್‌ಪೇಟೆ ಸರ್ಕಾರಿ ಪಿಯು ಕಾಲೇಜಿಗೆ ದಾಖಲೆಯ 97.78% ಫಲಿತಾಂಶ – ಅಭಿನಂದನೆಗಳ ಮಹಾಪೂರ
ರಿಪ್ಪನ್‌ಪೇಟೆ : ನಿರಂತರ ಪರಿಶ್ರಮ ಮತ್ತು ಗೆಲ್ಲಬೇಕೆನ್ನುವ ಛಲ ಇದ್ರೇ. ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳ ಶ್ರಮವಷ್ಟೇ ಅಲ್ಲ ವಿದ್ಯಾರ್ಥಿಗಳ ಜೊತೆ ಪೋಷಕರ ಮತ್ತು ಶಿಕ್ಷಕರ ಶ್ರಮವೂ ಪ್ರಮುಖವಾಗಿರುತ್ತದೆ. ಕಾಲೇಜು ಪ್ರಾರಂಭವಾಗಿ 41 ವರ್ಷದಲ್ಲಿ ಪಿಯುಸಿ ಫಲಿತಾಂಶದಲ್ಲಿ ದಾಖಲೆ ಬರೆದ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಕುರಿತ ಒಂದು ವರದಿ ಇಲ್ಲಿದೆ
ಕಾಲೇಜಿನ ಒಟ್ಟು ಫಲಿತಾಂಶ 97.78% ಆಗಿದ್ದು ಇದರಲ್ಲಿ ಕಲಾ ವಿಭಾಗ 98.57% ವಿಜ್ಞಾನ ವಿಭಾಗ ದಲ್ಲಿ 95.77%, ವಾಣಿಜ್ಯ ವಿಭಾಗ 98.82% ಫಲಿತಾಂಶ ಬಂದಿದೆ.ಕಾಲೇಜಿನ ಹಂತದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಭೂಮಿಕಾ ವಿಜ್ಞಾನ ವಿಭಾಗದಲ್ಲಿ 559 ಅಂಕ ಪಡೆದರೆ ,ವಾಣಿಜ್ಯ ವಿಭಾಗದಲ್ಲಿ ಇಂಚರ 577,ಹಾಗೂ ಕಲಾ ವಿಭಾಗದಲ್ಲಿ ತುಳಸಿ 578 ಅಂಕ ಪಡೆದಿರುತ್ತಾರೆ.
ರಿಪ್ಪನ್‌ಪೇಟೆ ಕಾಲೇಜಿನ ಇತಿಹಾಸದಲ್ಲಿಯೇ ಈ ಬಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ದಾಖಲೆ ಬರೆದಿದ್ದಾರೆ.1983 ರಲ್ಲಿ ರಿಪ್ಪನ್‌ಪೇಟೆ ಪಟ್ಟಣದ ಹೊರವಲಯದಲ್ಲಿ ಆರಂಭವಾದ ಪಿಯೂ ಕಾಲೇಜು ಇದೇ ಪ್ರಥಮ ಬಾರಿಗೆ ದಾಖಲೆ ಫಲಿತಾಂಶ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಮಿಂಚ ತೊಡಗಿದೆ.
ಇನ್ನೂ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡೋ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಮದ್ಯಮ ವರ್ಗದವ ರಾಗಿದ್ದು, ಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂತಾದ್ಧಾಗಿದೆ.ಅದೇನೆ ಇರಲಿ ಸಾಧಿಸಬೇಕೆನ್ನುವ ಛಲ ಇದ್ರೇ ಏನನ್ನಾದ್ರೂ ಮಾಡಬಹುದು ಅನ್ನೋದಕ್ಕೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.
ಕಳೆದ ವರ್ಷ ಕಾಲೇಜು ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಶಾಸಕ ಬೇಳೂರು ಗೋಪಾಲಕೃಷ್ಣ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ನೀಡಿ ಕಾಲೇಜಿನ ಅಭಿವೃದ್ಧಿಯ ಚಿಂತೆ ನನಗೆ ಬಿಡಿ ಎಂಬ ಪ್ರೋತ್ಸಾಹದ ನುಡಿಯನ್ನಾಡಿ ಹತ್ತಾರು ವರ್ಷಗಳಿಂದ ಸುಣ್ಣ ಬಣ್ಣ ಕಾಣದ ಕಾಲೇಜಿಗೆ ರಂಗುರಂಗಿನ ಮೆರುಗು ನೀಡಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳಿಗೆ ನವಚೈತನ್ಯ ನೀಡಿದ್ದರು.
ನೂತನ ಕಾಲೇಜು ಅಭಿವೃದ್ಧಿ ಸಮಿತಿ ,ಪ್ರಾಂಶುಪಾಲದ ಮಂಜುನಾಥ್ ಎ ಹಾಗೂ ಉಪನ್ಯಾಸಕರುಗಳ ವಿಶೇಷ ಆಸಕ್ತಿ ಹಾಗೂ ಶೈಕ್ಷಣಿಕ ಕಾಳಜಿಯು ದಾಖಲೆ ಮಟ್ಟದ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ಪೋಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.