Headlines

ಗರ್ತಿಕೆರೆಯಲ್ಲಿ ಕಿಡಿಗೇಡಿಗಳಿಂದ 15 ಕ್ಕೂ ಹೆಚ್ಚು ನಾಮಫಲಕ ಧ್ವಂಸ – ದೂರು ದಾಖಲು

ಗರ್ತಿಕೆರೆಯಲ್ಲಿ ಕಿಡಿಗೇಡಿಗಳಿಂದ 15 ಕ್ಕೂ ಹೆಚ್ಚು ನಾಮಫಲಕ ಧ್ವಂಸ – ದೂರು ದಾಖಲು 


ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಮ ಪಂಚಾಯತಿ ಮಳಲಿಕೊಪ್ಪ ಗ್ರಾಮದಲ್ಲಿ ಕಿಡಿಗೇಡಿಗಳ ಅಟ್ಟಹಾಸಕ್ಕೆ 15 ಕ್ಕೂ ಹೆಚ್ಚು ನಾಮಫಲಕಗಳು ಧ್ವಂಸವಾಗಿದ್ದು ಪುಂಡರ ಪುಂಡಾಟಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಪಂ ಸಚಿನ್ ಗೌಡ ಪ್ರತಿನಿಧಿಸುವ ಮಳಲಿಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ ವಿವಿಧ ಊರುಗಳಿಗೆ ತೆರಳುವ ಮಾರ್ಗಕ್ಕೆ ನಾಮಫಲಕವನ್ನು ಅಳವಡಿಸಲಾಗಿತ್ತು ಆದರೆ ಕಳೆದ ಬುಧವಾರ ರಾತ್ರಿ ಕಿಡಿಗೇಡಿಗಳು 15 ಕ್ಕೂ ಹೆಚ್ಚು ನಾಮಫಲಕವನ್ನು ಕಿತ್ತು ಹಾಕಿ ವಿಕೃತಿ ಮೆರೆದಿದ್ದಾರೆ.


ಈ ಬಗ್ಗೆ ಗ್ರಾಪಂ ಸದಸ್ಯ ಸಚಿನ್ ಗೌಡ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಗೆ ಕಾರಣ ರಾಜಕೀಯ ವೈಷಮ್ಯವೋ ಅಥವಾ ಕಿಡಿಗೇಡಿಗಳು ಎಣ್ಣೆ ಏಟಿಗೆ ನಡೆಸಿರುವ ಕೃತ್ಯವೋ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ.


About The Author

Leave a Reply

Your email address will not be published. Required fields are marked *