Headlines

Ripponpete | ಕಾರಗೋಡು ಕಲಾನಾಥೇಶ್ವರ ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಧರ್ಮಸಮಾರಂಭ

ಕಾರಗೋಡು ಕಲಾನಾಥೇಶ್ವರ ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಧರ್ಮಸಮಾರಂಭ


ರಿಪ್ಪನ್‌ಪೇಟೆ ;- ಧಾರ್ಮಿಕ ಆಚರಣೆ ಮನುಷ್ಯನಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತವೆಂದು ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಮ.ನಿ.ಪ್ರ.ಆಬಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.

ಸಮೀಪದ ಕಾರಗೋಡು ಗ್ರಾಮದಲ್ಲಿ ಕಲಾನಾಥೇಶ್ವರ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮದ ಧರ್ಮಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಜೀವನದಲ್ಲಿ ಸಾಧನೆಯ ಗುರಿ ತಲುಪಲು ಗುರುವಿನ ಕಾರುಣ್ಯ ಅಗತ್ಯ. ಮಹಾ ಶಿವರಾತ್ರಿಯ ದಿನದೊಂದು ಭವವಂತನ ನಾಮಸ್ಮರಣೆ ಪುಣ್ಯದ ಕೆಲಸವನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದೆಂದು ಹೇಳಿದರು.

ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ನೇತೃತ್ವ ವಹಿಸಿ ಆಶಿರ್ವಚನ ನೀಡಿ ಸಮಾಜದ ಸಂಘಟನೆಗೆ ಗ್ರಾಮದಲ್ಲಿ ದೇವಸ್ಥಾನ ಶಾಲೆಗಳು ನಿರ್ಮಾಣವಾಗಬೇಕು. ಧರ್ಮದ ಕಾರ್ಯಗಳೊಂದಿಗೆ ದೇಶ ಕಾಯುವ ಯೋಧರ ಮತ್ತು ವ್ಯಾಸಂಗ ಮಾಡುವ ಮಕ್ಕಳ ಶ್ರಯೋಭಿವೃದ್ದಿಗೆ ಹೆಚ್ಚು ಅಧ್ಯತೆ ನೀಡಿ ಎಂದ ಅವರು ಜಗತ್ತಿನಲ್ಲಿ ಒಳ್ಳೆಯ ಕಾರ್ಯಕ್ಕೆ ಗುರುವಿಗೆ ಶ್ರೇಷ್ಟ ಸ್ಥಾನ ನೀಡಲಾಗಿದೆ.ಬ್ರಹ್ಮ- ವಿಷ್ಣು -ಮಹೇಶ್ವರ ಮೂರು ಶಕ್ತಿಯನ್ನು  ಒಂದೇ ರೂಪದಲ್ಲಿ ಶಿವನ ಸ್ಮರಣೆಯಲ್ಲಿ ಕಾಣುವಂತಾಗಿದೆ ಎಂದ ಅವರು ಅನ್ನಕೊಡುವ ರೈತರ ಬದುಕು ಹಸನನಾಗಲು ಕಾಲಕಾಲಕ್ಕೆ ಮಳೆಯಾಗಿ ಸಂವೃದ್ಧಿಯನ್ನು ಕರುಣಿಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗಿದೆ ಎಂದರು.

ಕಲಾನಾಥೇಶ್ವರ ದೇವಸ್ಥಾನ ಸೇವಾಸಮಿತಿಯ ಅಧ್ಯಕ್ಷ ಯೋಗೇಂದ್ರ ಕಾರಗೋಡು ಆಧ್ಯಕ್ಷತೆ ವಹಿಸಿದರು.

ಕಲಾನಾಥೇಶ್ವರ ದೇವಸ್ಥಾನ ಸೇವಾಸಮಿತಿಯ ಗೌರವಾಧ್ಯಕ್ಷ ಹೊವಪ್ಪ ಕಾರಗೋಡು,ದೇವಸ್ಥಾನ ವಾಸ್ತು ಸಲಹೆಗಾರ ಲಿಂಗಸ್ವಾಮಿಗೌಡರು ಅಲುವಳ್ಳಿ,ಮಳಲಿಮಠದ ವೇ.ಶಿವರಾಜ ಆರಾಧ್ಯ ಶಾಸ್ತಿçಗಳು ಮುಖ್ಯ ಆತಿಥಿಗಳಾಗಿ ಭಾಗವಹಿಸಿದರು.

ವೈಧಿಕತ್ವದ ಸಾರತ್ಯದಲ್ಲಿ ವೇ// ಶಿವರಾಜ ಆರಾಧ್ಯ ಶಾಸ್ತಿçಗಳು ಮಳಲಿಮಠದ ಇವರಿಂದ ಶ್ರೀ ಕಲಾನಾಥೇಶ್ವರ ಸ್ವಾಮಿಯ ಹಾಗೂ ಪರಿವಾರ ಪುನರ್ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಹರೀಶ್ ಸ್ವಾಗತಿಸಿದರು,ಚೇತನಕುಮಾರ್ ನಿರೂಪಿಸಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.