Headlines

Ripponpete | ವಾರದ ಸಂತೆ ಮೀರಿಸಿದ ಹಾರೋಹಿತ್ಲು ಸರ್ಕಾರಿ ಶಾಲೆಯ ಮಕ್ಕಳ ಸಂತೆ

ವಾರದ ಸಂತೆ ಮೀರಿಸಿದ ಹಾರೋಹಿತ್ಲು ಶಾಲೆಯ ಮಕ್ಕಳ ಸಂತೆ


ರಿಪ್ಪನ್ ಪೇಟೆ :ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಿತ್ತಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು  ಬುಧವಾರ ಆಯೋಜಿಸಲಾಗಿತ್ತು.


ತರಕಾರಿಯನ್ನು ಒಳಗೊಂಡಂತೆ ವಿವಿಧ ವಸ್ತುಗಳ ಮಾರಾಟ ಮಾಡುವಲ್ಲಿನ ಮಕ್ಕಳ ಕೌಶಲ್ಯ ಯಾವುದೇ ವ್ಯಾಪಾರಸ್ಥನ ಸಾಮರ್ಥ್ಯಕ್ಕಿಂತ ಕಡಿಮೆ ಏನು ಇರಲಿಲ್ಲ. ತಾವು ಖರೀದಿಗಿಟ್ಟ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಎಲ್ಲ ಕೌಶಲಗಳು ನೈಜ ಸಂತೆಯನ್ನು ಮೀರಿಸುವಂತೆ ನಡೆಯುವ ಮೂಲಕ ಈ ಅಪರೂಪದ  ಮಕ್ಕಳ ಸಂತೆ ಗಮನ ಸೆಳೆಯಿತು.


ಶಾಲಾ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಮತ್ತು ಸಂವಹನ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಶಾಲೆಯ  ಅಂಗಳದಲ್ಲಿ ಆಯೋಜಿಸಿದ್ದ ಈ ಸಂತೆಯಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ತರಕಾರಿ, ಹಣ್ಣು ಹಾಗೂ  ಪಾನಿಪೂರಿ, ಬೋಂಡಾ, ಟೀ,ಕಾಫಿ, ಶರಭತ್ತು,ಎಳನೀರು, ಮಸಾಲೆ ಮಂಡಕ್ಕಿ, ಸೇರಿದಂತೆ ಇತರೆ ಆಹಾರ ವಸ್ತುಗಳನ್ನು  ಮಾರಾಟ ಮಾಡಿ ಲಾಭ-ನಷ್ಟದ ಪರಿಕಲ್ಪನೆ ಮತ್ತು ಸಾರ್ವಜನಿಕರೊಂದಿಗೆ ವ್ಯವಹರಿಸುವ ವಿಧಾನದ ಬಗ್ಗೆ  ತಿಳಿದುಕೊಂಡರು.

ವಾರದ ಸಂತೆಯೊಳಗಿನ ಎಲ್ಲಾ ಅಂಶಗಳು ಮಕ್ಕಳ ಸಂತೆಯಲ್ಲಿ ಮಿಳಿತವಾಗಿತ್ತು. ಸುಮ್ಮನೆ ಕುತೂಹಲಕ್ಕೆಂದು ಬಂದ ಸಾಕಷ್ಟು ಗ್ರಾಮದ ನಿವಾಸಿಗಳು ಬ್ಯಾಗ್ ಹಿಡಿದು ಮಕ್ಕಳೊಂದಿಗೆ ಚರ್ಚಿಸಿ ವ್ಯಾಪಾರ ಮಾಡುವ ಮೂಲಕ ವಾರದ ಸಂತೆಯನ್ನು ಮಕ್ಕಳ ಸಂತೆಯಲ್ಲೆ ಮುಗಿಸುವ ಧಾವಂತ ತೋರಿದ್ದು ವಿಶೇಷ ಆಗಿತ್ತು.

ಈ ಸಂದರ್ಭದಲ್ಲಿ  ಗ್ರಾಮದ ಹಿರಿಯರಾದ  ಬೀರ ನಾಯಕ, ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್,ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಚಂದ್ರ ,ಪ್ರಭಾರಿ ಮುಖ್ಯ ಶಿಕ್ಷಕಿ ಪೂಜಾ, ಸಹ ಶಿಕ್ಷಕರಾದ ಮಾಲತೇಶ್ ಎಂ ,ಕಾವ್ಯಾ ಪತ್ರಕರ್ತರಾದ  ಸಬಾಸ್ಟಿನ್,ರಫಿ ರಿಪ್ಪನ್‌ಪೇಟೆ, SDMC ಸದಸ್ಯರಾದ ರಮೇಶ್ ,ಶ್ರೀಮತಿ ,ಸತೀಶ್ ,ನಸ್ರೀನ್ ಭಾನು ,ಲಕ್ಷ್ಮಿ ಹಾಗೂ ಮಕ್ಕಳ ಪಾಲಕ-ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನವ್ಯ ,ನಿಶ್ಚಿತಾ ಹಾಗೂ ಸ್ವಾತಿ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *