ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಪ್ರಥಮ ಬಾರಿಗೆ ರಿಪ್ಪನ್‌ಪೇಟೆಗೆ ಆಗಮಿಸಿದ ಹರತಾಳು ಹಾಲಪ್ಪನವರಿಗೆ ಅದ್ದೂರಿ ಸ್ವಾಗತ | Ripponpete

ರಿಪ್ಪನ್‌ಪೇಟೆ: ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಪ್ರಥಮ ಬಾರಿ ರಿಪ್ಪನ್‌ಪೇಟೆಗೆ ಭೇಟಿ ನೀಡಿದ ಹರತಾಳು ಹಾಲಪ್ಪನವರಿಗೆ ವಿನಾಯಕ ವೃತ್ತದಲ್ಲಿ ಕಾರ್ಯಕರ್ತರು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಿದರು.


ನಂತರ ಬಿಜೆಪಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಆಚರಣೆಯ ವರ್ಷದ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತದ ಬಾವುಟವನ್ನು ಮನೆಮನೆಗಳಲ್ಲಿ ಹಾರಿಸುವ ಮೂಲಕ ಪಕ್ಷದ ಗಮನಸೆಳೆದಿರುವುದರೊಂದಿಗೆ ಬಿಜೆಪಿ ಬೂತ್ ಮಟ್ದದ ಅಧ್ಯಕ್ಷರ ಮನೆಗೆ ಭೇಟಿ ನೀಡಿ ನಾಮಫಲಕವನ್ನು ಅಳವಡಿಸಿದ ಪರಿಣಾಮದಿಂದಾಗಿ ರಾಷ್ಟ್ರೀಯ ಬಿಜೆಪಿ ನಾಯಕರು ನನಗೆ ಪಕ್ಷದಲ್ಲಿ ಗುರುತಿಸಿ ರಾಜ್ಯ ಉಪಾಧ್ಯಕ್ಷ ಹುದ್ದೆಯನ್ನು ನೀಡಿದ್ದಾರೆಂದು ಹೇಳಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರನ್ನು ಅಭಿನಂದಿಸಿದರು.

ಅಲ್ಲದೆ ನಮ್ಮ ಮೂಲ ಉದ್ದೇಶ ಭಾರತ ಚುನಾವಣೆಯಲ್ಲಿ ಗೆಲ್ಲಬೇಕು ಮೋದಿಜಿ ಮೊತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ದೇಯೋದ್ದೇಶದೊಂದಿಗೆ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯವ್ಯಾಪಿ ಸುತ್ತಾಡುವುದರೊಂದಿಗೆ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಉತ್ತೇಜಿಸಲಾಗುವುದು ಎಂದರು.

ಶೋಷಿತ ಪೀಡಿತರ ದಲಿತ ಜನಾಂಗದ ಉದ್ದಾರವೇ ಪರಮೋದ್ದಾರ ಎಂಬ ನಾಣ್ನುಡಿಯಂತೆ ಪಕ್ಷ ನೀಡಿದ ಜವಾಬ್ದಾರಿ ಹುದ್ದೆಯನ್ನು ಸಾರ್ಥಕ ಪಡಿಸುವುದರ ಬಗ್ಗೆ ಹಗಲಿರುಳು ಶ್ರಮಿಸುವುದಾಗಿ ಹೇಳಿ ಕರಸೇವಕರುಗಳೇ ನಮ್ಮ ಹೀರೋಗಳು ಅವರ ಬಗ್ಗೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟೀಕೆ ಮಾಡುವುದರೊಂದಿಗೆ ಕಳೆದ ಮೂವತ್ತು ವರ್ಷದ ಹಿಂದಿನ ಕೇಸ್‌ಗೆ ಜೀವಕೊಟ್ಟಿರುವುದರ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿ ಬಿಜೆಪಿ ಪಕ್ಷ ನಿಷ್ಟೆ ಹಾಗೂ ಸ್ವಾಮಿನಿಷ್ಟೆಗೆ ಸಿಕ್ಕದ ಮನ್ನಣೆ ಎಂದು ಹೇಳಿ ಪಕ್ಷದ ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷವನ್ನು ಸದೃಢವಾಗಿ ಸಂಘಟಿಸುವ ಸಂಕಲ್ಪ ನನ್ನದಾಗಿದೆ ವ್ಯಕ್ತಿತ್ವಕ್ಕಿಂತ ಪಕ್ಷವೇ ದೊಡ್ಡದಾಗಿದ್ದು ಪಕ್ಷ ನಿರ್ವಹಿಸಿರುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಹೇಳಿದರು.

ಸೇಡಿನ ರಾಜಕೀಯ:

ಸಾಗರ ಕ್ಷೇತ್ರ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸೇಡಿನ ರಾಜಕಾರಣಕ್ಕೆ ಇಳಿದಿದೆ. ಯಾವಾಗಲೋ ನಡೆದ ರಾಮಮಂದಿರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಪ್ರಕರಣ ದಾಖಲಗಿದೆ. ಮೈಸೂರಿನಲ್ಲಿ ಸಂಸದರ ಸಹೋದರನನ್ನು ಟಾರ್ಗೆಟ್ ಮಾಡಲಾಗಿದೆ. ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪರವಾಗಿದ್ದವರನ್ನು ಗುರುತಿಸಿ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದೆ ಹಲವು ರೈತರನ್ನು ಜೈಲಿಗೆ ಕಳುಹಿಸಲಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಸೇಡಿನ ರಾಜಕಾರಣವನ್ನು ಸಮರ್ಥವಾಗಿ ಎದುರಿಸುವ ಶಕ್ತಿಯಿಂದೆ ಮತ್ತು ಅವರಿಗೆ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದರು.

ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿ ನಾಮಫಲಕ:

ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅನುಷ್ಟಾನಗೊಳಿಸಲಾದ ಹಲವು ಅಭಿವೃದ್ಧಿ ಕಾಮಗಾರಿಗಳು ಈಗ ನಡೆಯುತ್ತಿದ್ದು ಅವುಗಳಿಗೆ ಇಂದಿನ ಶಾಸಕರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂಬ ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಪ್ರಶ್ನಿಸುವ ಮೂಲಕ ಮತದಾರರಿಗೆ ಹಿಂದಿನ ಸರ್ಕಾರ ಮಾಡಿರುವ ಕಾಮಗಾರಿ ಎಂದು ಹೇಳುವಂತಾಗಬೇಕು ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರುಗಳಾದ ನಾಗರತ್ನ ದೇವರಾಜ್, ವೀರೇಶ್ ಆಲವಳ್ಳಿ, ಬಿಜೆಪಿ ಜಿಲ್ಲಾ ಮುಖಂಡ ಆರ್.ಟಿ.ಗೋಪಾಲ,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ, ಎಂ.ಸುರೇಶ್‌ಸಿಂಗ್ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.

ಜೆಡಿಎಸ್ ಪಕ್ಷದಿಂದ ನೂತನ ರಾಜ್ಯ ಉಪಾಧ್ಯಕ್ಷರಿಗೆ ಅಭಿನಂದನೆ

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಪ್ರಥಮ ಬಾರಿ ರಿಪ್ಪನ್‌ಪೇಟೆಗೆ ಭೇಟಿ ನೀಡಿದ ಹರತಾಳು ಹಾಲಪ್ಪನವರಿಗೆ ಜೆಡಿಎಸ್ ಪಕ್ಷದ ವತಿಯಿಂದ ವಿನಾಯಕ ವೃತ್ತದಲ್ಲಿ ಹಾರ ಹಾಕಿ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಅರ್ ಎ ಚಾಬುಸಾಬ್ , ತಾಲೂಕ್ ಜೆಡಿಎಸ್ ಮುಖಂಡ ಸೋಮಶೇಖರ್ (ದೂನ ರಾಜು ) ಹಾಗೂ ಇನ್ನಿತರರಿದ್ದರು


Leave a Reply

Your email address will not be published. Required fields are marked *