Headlines

ಹರತಾಳು ಹಾಲಪ್ಪ ನಾಮಪತ್ರ ಸಲ್ಲಿಕೆ – ಸಾಗರದಲ್ಲಿ ಜನಸಾಗರ|nomination

ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹರತಾಳು ಹಾಲಪ್ಪನವರು ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ಹೊಳೆಕೊಪ್ಪದ ಧನಾಂಜನೇಯಸ್ವಾಮಿ ದೇವಸ್ತಾನದಲ್ಲಿ ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ಹಾಲಪ್ಪನವರು ನಂತರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರೆವಣಿಗೆ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗೂ ಕಾಗೋಡು ಪುತ್ರಿ ರಾಜನಂದಿನ ಜೊತೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೇರಿಸುವ ಮೂಲಕ ಹಾಲಪ್ಪ ಶಕ್ತಿ ಪ್ರದರ್ಶನ ಮಾಡಿದರು….

Read More

ರಿಪ್ಪನ್‌ಪೇಟೆ : ದಾಖಲಾತಿ ದುರುಪಯೋಗ ಆರೋಪ – ನವೋದಯ ಬ್ಯಾಂಕ್ ಮ್ಯಾನೇಜರ್ ವಿರುದ್ದ ದೂರು|Abuse of Enrollment

ರಿಪ್ಪನ್‌ಪೇಟೆ : ಇಲ್ಲಿನ ನವೋದಯ ವಿವಿದ್ದೋದ್ದೇಶ ಸೌಹಾರ್ಧ ಬ್ಯಾಂಕ್ ನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತಿದ್ದ ಮ್ಯಾನೇಜರ್ ಮಿಥುನ್ ವಿರುದ್ಧ ಬಟ್ಟೆಮಲ್ಲಪ್ಪ ನಿವಾಸಿ ಮಂಜುನಾಥ್ ಬ್ಯಾಣದ ಪೊಲೀಸ್ ಠಾಣೆಯಲ್ಲಿ ದಾಖಲಾತಿ ದುರುಪಯೋಗದ ವಿರುದ್ಧ ದೂರು ದಾಖಲಿಸಿದ್ದಾರೆ. ಉದ್ದಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಮಂಜುನಾಥ್ ಬ್ಯಾಣದ ನವೋದಯ ವಿವಿದ್ದೋದ್ದೇಶ ಸೌಹಾರ್ಧ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಒಂದು ಲಕ್ಷ ರೂ ಎಫ್ ಡಿ ಇಟ್ಟು ತಮ್ಮ OD ಖಾತೆಯಲ್ಲಿ 1.5 ಲಕ್ಷ ರೂ.ಸಾಲ ಪಡೆದಿದ್ದರು. 2017 ರಲ್ಲಿ ಸಾಲ…

Read More

ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಬಿ ಯುವರಾಜ್ ಗೌಡ ಸ್ಪರ್ಧೆ|election

ಸಾಗರ-ಹೊಸನಗರ ಕ್ಷೇತ್ರಕ್ಕೆ ಬಿ.ಯುವರಾಜ್‌ರವರು ಬಿ.ಜೆ.ಪಿ ಬಂಡಾಯ ಅಭ್ಯರ್ಥಿಯಾಗಿ ವಿಧಾನ ಸಭೆಯ ಚುನಾವಣೆಗೆ ಸ್ಪರ್ದಿಸುವುದಾಗಿ ತಿಳಿಸಿದ್ದಾರೆ. ಅವರು ಹೊಸನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಹಾಲಿ ಬಿ.ಜೆ.ಪಿ ಜಿಲ್ಲಾ ಸಮಿತಿ ಸದಸ್ಯರು ಹಾಲಿ ಜಿಲ್ಲಾ ಅಖಿಲ ಭಾರತ ವೀರಶೈವ ಮಾಹಾಸಭಾ ಕಾರ್ಯದರ್ಶಿಗಳು ಆಗಿದ್ದು ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ತಾಲೂಕು ಬಿ.ಜೆ.ಪಿ. ಅಧ್ಯಕ್ಷರಾಗಿ, ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ತಾಲೂಕ ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷರಾಗಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ನನಗೆ ಬಿಜೆಪಿ ಪಕ್ಷ ಇಲ್ಲಿಯವರೆಗೆ…

Read More

ಧರ್ಮದ ಪರಿಪಾಲನೆಯಲ್ಲಿ ಶ್ರದ್ಧೆ ಮುಖ್ಯ – ಮೂಲೆಗದ್ದೆ ಶ್ರೀ|Religious event

ಧರ್ಮದ ಪರಿಪಾಲನೆಯಲ್ಲಿ ಶ್ರದ್ಧೆ ಮುಖ್ಯ – ಮೂಲೆಗದ್ದೆ ಶ್ರೀ   ರಿಪ್ಪನ್ ಪೇಟೆ : ಸತ್ಯ, ಸದ್ಭಾವನೆ ಸಂಯಮ ಸಾಕ್ಷಾತ್ಕಾರ ಸರ್ವ ಸಿದ್ದಿ ಹಾಗೂ ಮೋಕ್ಷ ಧರ್ಮದ ಹಾದಿಯಾಗಿದೆ ಇಂತಹ ಧರ್ಮ ಪರಿಪಾಲನೆಯಲ್ಲಿ ಶ್ರದ್ಧಾ ಭಕ್ತಿ ಮುಖ್ಯವೆಂದು ಮೂಲೆಗದ್ದೆ ಮಠದ ಪೀಠಾಧಿಕಾರಿ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.  ಪಟ್ಟಣದ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಆನ್ನಪೂರ್ಣೇಶ್ವರಿ ಆಮ್ಮನವರ ದೇವಸ್ಥಾನದ 6 ನೇ ವರ್ಷದ ಪ್ರತಿಷ್ಠ  ವರ್ಧಂತ್ಯುತ್ಸವ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.  ದೇವಸ್ಥಾನ…

Read More

ಆಗುಂಬೆ ಘಾಟಿಯಲ್ಲಿ ಕೆಟ್ಟು ನಿಂತ ಕಾರು – ಟ್ರಾಫಿಕ್ ಜಾಮ್,ಪ್ರಯಾಣಿಕರ ಪರದಾಟ|agumbe traffic

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ ಏಳನೇ ತಿರುವಿನಲ್ಲಿ ಎರಡು ಕಾರುಗಳು ಏಕಾಏಕಿ ಕೆಟ್ಟು ನಿಂತು ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ. ತೀರ್ಥಹಳ್ಳಿ ಕಡೆಯಿಂದ ಉಡುಪಿ ಹಾಗೂ ಉಡುಪಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು ಅರ್ಧ ಗಂಟೆಗೂ ಹೆಚ್ಚು ಸಮಯ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ. ಸುಮಾರು ಮೂರು ಕಿಲೋಮೀಟರ್ ಗಳವರೆಗೆ ರಸ್ತೆ ಬದಿಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ನಂತರ ಸ್ಥಳಕ್ಕೆ ಆಗುಂಬೆ…

Read More

ರಿಪ್ಪನ್‌ಪೇಟೆ – ಬ್ಯಾಂಕ್ ನೋಟಿಸಿಗೆ ಹೆದರಿ ರೈತ ಆತ್ಮಹತ್ಯೆ|crime news

ರಿಪ್ಪನ್‌ಪೇಟೆ;- ಸಮೀಪದ ಮೂಗುಡ್ತಿ ಗ್ರಾಮದ ಕೋಮಲಾಪುರ ನಿವಾಸಿ ಮಂಜನಾಯ್ಕ್ (85) ಸಾಲದ ಬಾಧೆಯಿಂದ ಕಳೆನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಯ್ಕ್ ಬಿನ್ ಕೊಲ್ಲನಾಯ್ಕ  ಸುಮಾರು (85) ವರ್ಷಎಂಬುವರಿಗೆ  ತಕ್ಷಣ ಅವರನ್ನು ರಿಪ್ಪನ್‌ಪೇಟೆಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸಗಾಗಿ ಕರೆತರಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತು ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. 3 ಇವರು ತಳಲೆ ವಿ.ಎಸ್.ಎಸ್.ಎನ್.ಬಿ.ಯಲ್ಲಿ 1.15.000 ಬೆಳೆ ಸಾಲ ಮತ್ತು 50.000.00 ಸಾವಿರ ವೈಯಕ್ತಿಕ…

Read More

ಭೂಮಿ ಹಕ್ಕಿಗಾಗಿ – ಬಿಜೆಪಿ ಬೆಂಬಲಿಸಿ : ಹರತಾಳು ಹಾಲಪ್ಪ|HALAPPA

ಭೂಮಿ ಹಕ್ಕಿಗಾಗಿ- ಬಿಜೆಪಿ ಬೆಂಬಲಿಸಿ:  ಹಾಲಪ್ಪ ಎಚ್ ಹರತಾಳು   ರಿಪ್ಪನ್ ಪೇಟೆ : ಮಲೆನಾಡಿನ ಜ್ವಲಂತ ಸಮಸ್ಯೆಯಾದ ಭೂ ಹಕ್ಕಿನ   ವಿಚಾರಧಾರೆಯನ್ನು ವಿಧಾನಸೌಧದ ಒಳಗೂ ಹಾಗೂ ಹೊರಗೂ ಸಮರ್ಥವಾಗಿ ಪ್ರತಿಪಾದಿಸಲು ಈ ಬಾರಿ ಸಾಗರ ವಿಧಾನ ಸಭಾ  ಕ್ಷೇತ್ರ ದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಆಯ್ಕೆ ಮಾಡುವಂತೆ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹಾಲಪ್ಪ ಎಚ್.  ಹರತಾಳು ಮನವಿ ಮಾಡಿದರು. ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ ಫಾರಂ ಪಡೆದ ನಂತರ…

Read More

ರಿಪ್ಪನ್‌ಪೇಟೆ : ಓಟಿಪಿ ನಂಬರ್ ಪಡೆದು ಲಕ್ಷಾಂತರ ರೂ ವಂಚನೆ – ಮನೆ ಮಾರಿದ ಹಣ ಕಳೆದುಕೊಂಡ ಅಮಾಯಕ|cyber crime

ಭಾರತದಲ್ಲಿ ನೋಟ್‌ ಬ್ಯಾನ್‌ ಆದ ನಂತರ ಜನ ಡಿಜಿಟಲ್‌ ಹಣಕಾಸಿನ ವ್ಯವಹಾರದ ಕಡೆ ಮುಖ ಮಾಡಿದರು. ಇದರಿಂದ ಜೀವನ ಒಂದು ಮಟ್ಟಕ್ಕೆ ಸುಧಾರಿಸಿತು ಎನ್ನುವಾಗಲೇ ಡಿಜಿಟಲ್‌ ಮೋಸಗಳು ಹೆಚ್ಚುತ್ತಿದ್ದು, ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ನಂಬಿಸಿ ಓಟಿಪಿ ನಂಬರ್‌ ಪಡೆದ ವ್ಯಕ್ತಿಯೊಬ್ಬರಿಗೆ ಸೈಬರ್‌ ಕಳ್ಳರು 1.80 ಲಕ್ಷ ರೂ. ವಂಚಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಚೌಡೇಶ್ವರಿ ಬೀದಿಯ ಸ್ವಾಮಿ (55) ವಂಚನೆಗೊಳಗಾದವರು. ಏಪ್ರಿಲ್…

Read More

ಇಬ್ಬರೂ ಒಟ್ಟಾದ್ರೆ ಏನ್ ಭೂಕಂಪ ಆಗುತ್ತಾ ; ಕಿಮ್ಮನೆ-ಆರ್‌ಎಂಎಂಗೆ ತಿವಿದ ಆರಗ ಜ್ಞಾನೇಂದ್ರ|thirthahalli

ರಿಪ್ಪನ್‌ಪೇಟೆ : ಟಿಕೆಟ್‌ಗಾಗಿ ಅಥವಾ ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ಹೋಗುವವನು ನಾನಲ್ಲ. ಇಂತಹ ಸಂದರ್ಭ ಬರುವುದಿಲ್ಲ. ಸಂದರ್ಭ ಬಂದಲ್ಲಿ ಚುನಾವಣಾ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಯಾವುದೇ ಕಾರಣ ಕೊಡದೆ ಇನ್ನೊಬ್ಬರಿಗಾಗಿ ಕೆಲಸ ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕೋಡೂರಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 10 ಬಾರಿ ಒಂದೇ ಪಕ್ಷ ಒಂದೇ ಚಿಹ್ನೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 4 ಬಾರಿ ಶಾಸಕನಾಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ನಾನು ತತ್ವಕ್ಕಾಗಿ, ಸಿದ್ದಂತಕ್ಕಾಗಿ ರಾಜಕಾರಣ ಮಾಡುವವನು. ಈ…

Read More

ರಿಪ್ಪನ್‌ಪೇಟೆ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಗಂಭೀರ : ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ|accident

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ನಡೆದಿದ್ದು, ಈ ಘಟನೆಯ ಭಯಾನಕ‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ತಳಲೆ ಗ್ರಾಮದಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ನಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೋಡೂರು ಗ್ರಾಮದ ಚೂಡಾಮಣಿ ಮತ್ತು ಪತ್ನಿ ಮೋಹಿನಿ ಬೈಕ್ ನಲ್ಲಿ ತಳಲೆ ಕಡೆ ಹೋಗುತಿದ್ದಾಗ ಮೂಗೂಡ್ತಿಗೆ ಬರುತಿದ್ದ  ಮುತ್ತಿನಕೊಪ್ಪ ಗ್ರಾಮದ ಕೃಷ್ಣಮೂರ್ತಿ…

Read More