Ripponpete | ಅಯೋಧ್ಯ ಶ್ರೀರಾಮಮಂದಿರ ಮಂತ್ರಾಕ್ಷತೆಗೆ ಭವ್ಯ ಸ್ವಾಗತ

ರಿಪ್ಪನ್‌ಪೇಟೆ : ಜನವರಿ 22 ಎಂದು ಆಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಆಮಂತ್ರಣ ಮತ್ತು ಮಂತ್ರಾಕ್ಷತೆ ವಿತರಣೆಯ ಅಂಗವಾಗಿ ರಿಪ್ಪನ್‌ಪೇಟೆ ವಿನಾಯಕ ವೃತ್ತಕ್ಕೆ ಅಯೋಧ್ಯ ಶ್ರೀರಾಮಮಂದಿರ ಮಂತ್ರಾಕ್ಷತೆ ಬರುತ್ತಿದ್ದಂತೆ ಭವ್ಯ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ಶಿವಮೊಗ್ಗ ರಸ್ತೆಯಲ್ಲಿರುವ ಶ್ರೀ ವಿಘ್ನನಿವಾರಕ ದೇವಸ್ಥಾನದಲ್ಲಿಟ್ಟು ಪೂಜೆ ಸಲ್ಲಿಸಿದರು.
ಎನ್.ಸತೀಶ್ ಮಂತ್ರಾಕ್ಷತೆಯ ಕೊಡಪಾನವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತ ಸಮೂಹದೊಂದಿಗೆ ಭಕ್ತಿ ಶ್ರದ್ದೆಯಿಂದ ಶ್ರೀರಾಮನ ಜಯಘೋಷಣೆಯೊಂದಿಗೆ ತೆರಳಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರ್ ಶೆಟ್ಟಿ , ಆರ್.ಟಿ.ಗೋಪಾಲ್, ಪದ್ಮಾ ಸುರೇಶ್, ಎಂ.ಸುರೇಶ್‌ಸಿಂಗ್, ಎಂ.ಬಿ.ಮಂಜುನಾಥ, ನಾಗರತ್ನ ದೇವರಾಜ್, ಲೀಲಾ ಉಮಾಶಂಕರ್, ಉಮಾಸುರೇಶ್, ಶೈಲಾ ಆರ್.ಪ್ರಭು,ಅಮಿತಾ ಬಲ್ಲಾಳ್ , ರೇಖಾರವಿ, ಗೀತಾ, ದೇವರಾಜ್, ಶ್ರೀನಿವಾಸ್ ಆಚಾರ್, ಸುಂದರೇಶ್, ಸುಧೀಂದ್ರ ಪೂಜಾರಿ, ಲಕ್ಷ್ಮಿ ಶ್ರೀನಿವಾಸ, ಮಂಜಪ್ಪ, ಕಾರ್ತಿಕ್ ಎನ್.ನಾಯ್ಕ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *