Headlines

ರೈಲ್ವೆ ನಿಲ್ದಾಣದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ | Railway

ರೈಲ್ವೆ ನಿಲ್ದಾಣದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ | ಶಿವಮೊಗ್ಗ : ಇಲ್ಲಿನ ರೈಲುನಿಲ್ದಾಣದಲ್ಲಿ ಭದ್ರಾವತಿ ಕಡೆಗೆ ಹೋಗುವ ಕೊನೆಯ ರೈಲ್ವೆ ಟ್ರಾಕ್ ಮೇಲೆ ಸುಮಾರು 30 ವರ್ಷದ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ.  ಕರ್ತವ್ಯದಲ್ಲಿದ್ದ ಕೀ ಮ್ಯಾನ್ ಟ್ರ್ಯಾಕ್ ಪರಿಶೀಲನೆ ವೇಳೆಯಲ್ಲಿ ಶವ ಪತ್ತೆಯಾಗಿದೆ. ಶವವು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶೈತ್ಯಗಾರದಲ್ಲಿರುತ್ತದೆ. ಮೃತ ವ್ಯಕ್ತಿಯ ಚಹರೆ ಸುಮಾರು 5.8 ಅಡಿ ಎತ್ತರ, ಸಾದಾ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ…

Read More

SAGARA | ಕಳ್ಳತನ ಪ್ರಕರಣ ಹೆಚ್ಚುತ್ತಿದ್ದರೂ ಕೈಕಟ್ಟಿ ಕುಳಿತ ಪೊಲೀಸರು; ಗ್ರಾಮಸ್ಥರ ಪ್ರತಿಭಟನೆ

ಕಳ್ಳತನ ಪ್ರಕರಣ ಹೆಚ್ಚುತ್ತಿದ್ದರೂ ಕೈಕಟ್ಟಿ ಕುಳಿತ ಪೊಲೀಸರು; ಗ್ರಾಮಸ್ಥರ ಪ್ರತಿಭಟನೆ ಸಾಗರ : ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದಲೂ ನಡೆಯುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಸೂಕ್ತ ಕ್ರಮಕ್ಕೆ ಪೊಲೀಸರು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಡಿವೈಎಸ್‌ಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಎಡಜಿಗಳೇಮನೆ ಗ್ರಾಮದ ಸುಮಾರು ೫೦ಕ್ಕೂ ಹೆಚ್ಚಿನ ಗ್ರಾಮಸ್ಥರ ತಂಡದ ನೇತೃತ್ವ ವಹಿಸಿ ಮಾತನಾಡಿದ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸಾಗರ ನಗರದಿಂದ…

Read More

Ripponpete | ಅನ್ಯ ಭಾಷೆಯ ವ್ಯಾಮೂಹ ಸಲ್ಲ – ವೀರೇಶ್ ಆಲುವಳ್ಳಿ

ಅನ್ಯ ಭಾಷೆಯ ವ್ಯಾಮೂಹ ಸಲ್ಲ – ವೀರೇಶ್ ಆಲುವಳ್ಳಿ ರಿಪ್ಪನ್‌ಪೇಟೆ : ಕನ್ನಡ ನಾಡಿನ ಭಾಷೆ  ಮತ್ತು ನಮ್ಮ ಸಂಸ್ಕೃತಿ ಎಲ್ಲರನ್ನು ಆಕರ್ಷಿಸುವಂತಹದ್ದು.ಅದರೆ ನಾವುಗಳು ಅನ್ಯ ಭಾಷೆಯ ವ್ಯಾಮೂಹದಿಂದಾಗಿ ನಮ್ಮ ಮಾತೃ ಭಾಷೆ ಕನ್ನಡವನ್ನು ಮಾತನಾಡದೇ ಬೇರೆ ಭಾಷೆಯನಾಡುತ್ತಾ ಮಕ್ಕಳಿಗೆ ಅದನ್ನು ಕಲಿಸುತ್ತಿರುವುದರ ಬಗ್ಗೆ ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ ಕಳವಳ ವ್ಯಕ್ತ ಪಡಿಸಿದರು. ರಿಪ್ಪನ್‌ಪೇಟೆಯ ಕಲಾಕೌಸ್ತೂಭ ಕನ್ನಡ ಸಂಘದ 30 ನೇ ವರ್ಷದ ವಾರ್ಷೀಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ…

Read More

ಆಂಧಕಾರದ ಕತ್ತಲು ದೂರಮಾಡಿ ಬೆಳಕು ಮೂಡಿಸುವುದೇ ಕಾರ್ತಿಕಾ ದೀಪೋತ್ಸವ – ಮೂಲೆಗದ್ದೆ ಶ್ರೀಗಳು | moolegadde

ಆಂಧಕಾರದ ಕತ್ತಲು ದೂರಮಾಡಿ ಬೆಳಕು ಮೂಡಿಸುವುದೇ ಕಾರ್ತಿಕಾ ದೀಪೋತ್ಸವ – ಮೂಲೆಗದ್ದೆ ಶ್ರೀಗಳು   ರಿಪ್ಪನ್‌ಪೇಟೆ : ನಮ್ಮಲ್ಲಿರುವ ಆಂಧಕಾರದ ಕತ್ತಲು ದೂರಮಾಡಿ ಬೆಳಕು ಮೂಡಿಸುವುದೇ ಕಾರ್ತಿಕಾ ದೀಪೋತ್ಸವ ಮಣ್ಣಿನ ಪಣತೆಯ ದೀಪಾರಾಧನೆ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಆಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು. ಸದಾನಂದಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಆಯೋಜಿಸಲಾದ ಲಿಂಗೈಕ್ಯ ಪೂಜೆ ಶ್ರೀಗಳ ಪುಣ್ಯಾರಾಧನಾ ಕಾರ್ತಿಕಾ ದೀಪೋತ್ಸವ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಮಾವಿನಹೊಳೆಯಲ್ಲಿ ತಪ್ಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ…

Read More

Ripponpete | ಗವಟೂರಿನಲ್ಲಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ – ಮಹಿಳೆಯ ಕಾಲು ಮುರಿತ

Ripponpete | ಗವಟೂರಿನಲ್ಲಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ – ಮಹಿಳೆಯ ಕಾಲು ಮುರಿತ ರಿಪ್ಪನ್‌ಪೇಟೆ : ಇಲ್ಲಿನ ಗವಟೂರಿನಲ್ಲಿ ಕಾರು ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತವಾಗಿ ಸ್ಕೂಟಿಯಲ್ಲಿದ್ದ ಮಹಿಳೆಯ ಕಾಲು ಮುರಿತವಾದ ಘಟನೆ ನಡೆದಿದೆ. ಹೊಸನಗರ ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಹಾಗೂ ಹಳಿಯೂರು ರಸ್ತೆಯಿಂದ ಮುಖ್ಯ ರಸ್ತೆಗೆ ಬಂದ ಸ್ಕೂಟಿಗೆ ಡಿಕ್ಕಿಯಾಗಿದೆ. ಬೈಕ್ ನಲ್ಲಿ ದೊಡ್ಡಿನಕೊಪ್ಪ ಗ್ರಾಮದ ಚಂದ್ರಬಾಬು ಮತ್ತು ಲಕ್ಷ್ಮಿ ದಂಪತಿಗಳು ಪ್ರಯಾಣಿಸುತಿದ್ದು ಘಟನೆಯಲ್ಲಿ ಲಕ್ಷಿ ರವರ ಬಲಗಾಲು…

Read More

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ – ಪಿಎಸ್‌ಐ ಪ್ರವೀಣ್ ಎಸ್ ಪಿ | Neharu cricketers

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ – ಪಿಎಸ್‌ಐ ಪ್ರವೀಣ್ ಎಸ್ ಪಿ ರಿಪ್ಪನ್‌ಪೇಟೆ : ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು. ಪಟ್ಟಣದ ಹೊಸನಗರ ರಸ್ತೆಯ ಆರ್ ಸಿಸಿ ಕ್ರೀಡಾಂಗಣದಲ್ಲಿ ನೆಹರು ಕ್ರಿಕೆಟರ್ಸ್ ಆಯೋಜಿಸಿದ್ದ ಹೊನಲು ಬೆಳಕಿನ 30 ಗಜದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯೂ ಜೀವನದ ಒಂದು ಭಾಗವಾಗಿದ್ದು ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತದೆ. ನೀತಿ ನಿಯಮಗಳ ಸಂವಹನೆಯೊಂದಿಗೆ ಶಿಸ್ತಿನ ಅರಿವು ಉಂಟಾಗುತ್ತದೆ….

Read More

ಸಾಮಾಜಿಕ ಜಾಲತಾಣದಲ್ಲಿ ಭದ್ರಾವತಿ ಶಾಸಕರ ವಿರುದ್ಧ ಪೋಸ್ಟ್ – ಬಿಜೆಪಿ ಕಾರ್ಯಕರ್ತನ ಕಾರು ಜಖಂ | Bdvt

ಸಾಮಾಜಿಕ ಜಾಲತಾಣದಲ್ಲಿ ಭದ್ರಾವತಿ ಶಾಸಕರ ವಿರುದ್ಧ ಪೋಸ್ಟ್ – ಬಿಜೆಪಿ ಕಾರ್ಯಕರ್ತನ ಕಾರು ಜಖಂ  ಫೇಸ್ ಬುಕ್ ನಲ್ಲಿ ಭದ್ರಾವತಿ ಶಾಸಕರ ವಿರುದ್ದ ಬರೆದುಕೊಂಡಿದ್ದ ಬಿಜೆಪಿ ಕಾರ್ಯಕರ್ತನ ಕಾರಿನ ಗ್ಲಾಜುಗಳನ್ನ ಪುಡಿ ಪುಡಿ ಮಾಡಲಾಗಿದೆ.‌ ಇದರಿಂದ ಮತ್ತೊಂದು ಬಲಪ್ರಯೋಗದ ರಾಜಕಾರಣಕ್ಕೆ ಭದ್ರಾವತಿ ಸಾಕ್ಷಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ವಿರುದ್ದ ಬರೆದುಕೊಂಡಿದ್ದ ಬಿಜೆಪಿ ಯುವ‌ ಮೋರ್ಚಾ ಕಾರ್ಯಕರ್ತ ಗೋಕುಲ್ ಅವರ ಮನೆಯ ಮುಂದೆ ನಿಂತಿದ್ದ ಸ್ವಿಫ್ಟ್ ಕಾರಿನ ಗ್ಲಾಜುಗಳನ್ನ ಒಂದೇ ಬೈಕಿನಲ್ಲಿ ಬಂದ ಮೂವರು ಕಿಡಿಗೇಡಿಗಳು…

Read More

ಬಂಗಾರಪ್ಪ ಕುಟುಂಬದ ಮಧು ಮತ್ತು ಕುಮಾರ್ ಒಂದಾಗಲಿ – ಹರತಾಳು ಹಾಲಪ್ಪ | haratalu halappa

ಬಂಗಾರಪ್ಪ ಕುಟುಂಬದ ಮಧು ಮತ್ತು ಕುಮಾರ್ ಒಂದಾಗಲಿ – ಹರತಾಳು ಹಾಲಪ್ಪ | haratalu halappa ಸಾಗರ : ನಾವೆಲ್ಲರೂ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಬಂದವರು. ನನಗೂ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಒಂದಾದರೆ, ಗುರುಗಳಾದ ಬಂಗಾರಪ್ಪನವರ ಕುಟುಂಬ ಒಟ್ಟಾದರೆ ಸಂತೋಷವಿದೆ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು ಪ್ರತಿಕ್ರಿಯಿಸಿದ್ದಾರೆ. ಮಾದ್ಯಮದವರೊಂದಿಗೆ ಶನಿವಾರದಂದು ಸಂವಾದ ನಡೆಸಿದ ಅವರು, ಕಟ್ಟಾ ಬಿಜೆಪಿಗನಾಗಿ ಈ ಮಾತನ್ನು ಹೇಳಲು ಬಯಸುವುದಿಲ್ಲ.ಆದರೆ ಒಬ್ಬ ಈಡಿಗನಾಗಿ ಹಾಗೇನಾದರೂ ಅವರಿಬ್ಬರೂ ಮತ್ತೆ ಒಗ್ಗೂಡಿದರೆ ಖುಷಿಯ…

Read More

ಡಿ.18ರಂದು ರಾಮನಸರ ಶ್ರೀ ನಾಗದೇವತೆ ಕ್ಷೇತ್ರದಲ್ಲಿ ‘ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ

ಡಿ.18ರಂದು ರಾಮನಸರ ಶ್ರೀ ನಾಗದೇವತೆ ಕ್ಷೇತ್ರದಲ್ಲಿ ‘ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ ರಿಪ್ಪನ್‌ಪೇಟೆ : ಗರ್ತಿಕೆರೆ ಸಮೀಪದ ರಾಮನಸರ ಶ್ರೀ ನಾಗದೇವತೆ ಕ್ಷೇತ್ರದಲ್ಲಿ ಡಿ.18ರ ಸೋಮವಾರ 17ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ ಆಯೋಜಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ದೇವಸ್ಥಾನದ ವ್ಯವಸ್ಥಾಪಕರಾದ ಸುನಂದ, ಚಂದ್ರಶೇಖರ್(ಪುಟ್ಟ) ಹಾಗೂ ನಾಗರಾಜ್ ರಾಮನರಸ ಅವರು, ಅಂದು ಬೆಳಿಗ್ಗೆ ದೇವರಿಗೆ ಗಣಹೋಮ, ಪಂಚ ವಿಂಶತಿ ಕಲಶ, ಕಲಾತತ್ವ ಅಧಿವಾಸ ಹೋಮ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ, ಆಶ್ಲೇಷ ಬಲಿ, ರಾತ್ರಿ…

Read More

ರಾಜ್ಯಕ್ಕೆ ಬೆಳಕು ಕೊಟ್ಟ ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ಕೊಡಿ: ಸಿಎಂಗೆ ಸಚಿವ ಮಧು ಬಂಗಾರಪ್ಪ ಮನವಿ | MB

ಜಾಗ ಬಿಟ್ಟು ರಾಜ್ಯಕ್ಕೆ ಬೆಳಕು ಕೊಟ್ಟ ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ಕೊಡಿ: ಸಿಎಂಗೆ ಸಚಿವ ಮಧು ಬಂಗಾರಪ್ಪ ಮನವಿ ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಸಮುದಾಯದ ಪರವಾಗಿ ಕೈ ಮುಗಿದು ಮನವಿ ಮಾಡಿದರು. ಪ್ರದೇಶ ಆರ್ಯ ಈಡಿಗ ಸಂಘ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಈಡಿಗ, ಬಿಲ್ಲವ ಮತ್ತು ನಾಮದಾರಿ ಸೇರಿ 26 ಪಂಗಡಗಳ ಬೃಹತ್…

Read More