ಅನೈತಿಕ ಸಂಬಂಧ ಹಿನ್ನಲೆ – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ | Crime News
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯೇ ಪತ್ನಿಯ ಕತ್ತು ಸೀಳಿ ಕೊಲೆಗೈದ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆಯ ಬಡಾವಣೆಯಲ್ಲಿ ನಡೆದಿದೆ.
ತಡವಾಗಿ ಘಟನೆ ಬೆಳಕಿಗೆ ಬಂದಿದ್ದು, ರಮ್ಯ (38) ಕೊಲೆಯಾದ ದುರ್ದೈವಿಯಾಗಿದ್ದಾಳೆ. ಪತಿ ನಾಗಭೂಷಣ ಬಂಧಿತ ಆರೋಪಿಯಾಗಿದ್ದಾನೆ.
ಕೊಲೆಯಾದ ರಮ್ಯಾ ಈ ಮೊದಲು ವಿವಾಹವಾಗಿ ವಿಚ್ಛೇದನ ನೀಡಿದ್ದಳು. ನಾಗಭೂಷಣ ಸಹ ಮೊದಲ ಪತ್ನಿಗೆ ವಿಚ್ಛೇದನ ನೀಡಿ ರಮ್ಯ ಜೊತೆ ಎರಡನೇ ಮದುವೆಯಾಗಿದ್ದನು. ಕಳೆದ ಮೂರು ವರ್ಷದ ಹಿಂದೆ ದೇವಸ್ಥಾನದಲ್ಲಿ ಇಬ್ವರು ಮದುವೆಯಾಗಿದ್ದರು.
ಚಿಕ್ಕಬಳ್ಳಾಪುರ ಮೂಲದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ನಾಗಭೂಷಣ್, ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡಿದ್ದನು. ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊದಿದ್ದ ಎಂದು ರಮ್ಯ ಅನುಮಾನ ಪಟ್ಟಿದ್ದಳು.
ಪತಿಯ ಅನೈತಿಕ ಸಂಬಂಧ ವಿಷಯ ಪತ್ನಿಗೆ ತಿಳಿದು ಇಬ್ಬರ ನಡುವೆ ಜಗಳ ಉಂಟಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಬುಧವಾರ ರಾತ್ರಿ ಆರೋಪಿ ಕೊಲೆಗೈದಿದ್ದಾನೆ. ಪತ್ನಿ ಕೊಲೆಗೈದು ಪತಿ ನಾಗಭೂಷಣ್ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ. ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.