Headlines

ಸ್ನೇಹಿತನಿಂದ ಕಾರು ಪಡೆದು ವಂಚನೆ – 08 ಕಾರು ಸಹಿತ ಆರೋಪಿಯ ಬಂಧನ

ಸ್ನೇಹಿತನಿಂದ ಕಾರು ಪಡೆದು ವಂಚನೆ – 08 ಕಾರು ಸಹಿತ ಆರೋಪಿಯ ಬಂಧನ
ಶಿವಮೊಗ್ಗ : ಹೆಂಡತಿಗೆ ಅನಾರೋಗ್ಯವಿದೆ ಎಂದು ಹೇಳಿ ಕಾರನ್ನು ಸ್ನೇಹಿತನಿಂದ ಪಡೆದುಕೊಂಡು ವಾಪಾಸ್ ಕೊಡದೆ ಮೋಸ ಮಾಡಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 08 ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರ್.ಎಂ.ಎಲ್ ನಗರದ ನಿವಾಸಿ ಸೈಯದ್ ಸಾದಿಕ್‌ರವರ ಟಾಟಾ ಇನ್ನೋವಾ ಕಾರನ್ನು ಆತನ ಪರಿಚಯಸ್ಥನಾದ ಕಿರಣ್ ಕುಮಾರ್ @ ಗುಂಡ ಎಂಬಾತ ತೆಗೆದುಕೊಂಡು ಹೋಗಿ ಕಾರನ್ನು ವಾಪಾಸ್ ಕೊಡದೇ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮೋಸ ಮಾಡಿದ್ದಾನೆಂದು, ಸೈಯ್ಯದ್ ಸಾದಿಕ್ ದೂರು ನೀಡಿದ್ದರು.

ಪ್ರರಕಣದಲ್ಲಿ ಆರೋಪಿ ಹಾಗೂ ಕಾರಿನ ಪತ್ತೆಗಾಗಿ ಎಸ್.ಪಿ ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಸೋಮವಾರ ಪ್ರಕರಣದ ಆರೋಪಿ ಕಿರಣ್ (35) ಈತನನ್ನು ಬಂಧಿಸಿ ಅಂದಾಜು 10 ಲಕ್ಷ ರೂ.ಗಳ 2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್ ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 8 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *