January 11, 2026

ರಿಪ್ಪನ್‌ಪೇಟೆ – ಕನ್ನಡಪರ ಹೋರಾಟಗಾರ ವಿನಾಯಕ್ ಶೆಟ್ಟಿ ಹೃದಯಾಘಾತದಿಂದ ನಿಧನ|RPET

ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿನ ಭಗತ್ ಸಿಂಗ್ ನಗರದ ನಿವಾಸಿ ಕನ್ನಡ ಪರ ಹೋರಾಟಗಾರ ಸಮಾಜ ಸೇವಕ ಹಾಗೂ ಪುನೀತ್ ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿನಾಯಕ್ ಶೆಟ್ಟಿ (26) ಇಂದು ಬೆಳಗಿನಜಾವ ಹೃದಯಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಗಿನಜಾವ ವಿನಾಯಕ್ ಶೆಟ್ಟಿ ರವರಿಗೆ (ಭಾನುವಾರ) ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.

ಮೃತ ವಿನಾಯಕ್ ಶೆಟ್ಟಿ ತಂದೆ, ತಾಯಿ, ಓರ್ವ ಸಹೋದರಿ, ಓರ್ವ ಸಹೋದರ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಮತ್ತು ಸ್ನೇಹಿತರನ್ನು ಅಗಲಿದ್ದಾರೆ.

ಕನ್ನಡ ಪರ ಹೋರಾಟದಿಂದ ಪಟ್ಟಣದಾದ್ಯಂತ ಮನೆ ಮಾತಾಗಿದ್ದ ವಿನಾಯಕ್ ಶೆಟ್ಟಿ ನಿಧನದಿಂದ ಅವರ ಅಪಾರ ಸ್ನೇಹಿತ ಬಳಗದಲ್ಲಿ ದುಃಖ ಮಡುಗಟ್ಟಿದೆ.  ಪಟಪಟನೆ ಮಾತನಾಡುತ್ತ ಕನ್ನಡಪರ ಹೋರಾಟದ ಬಗ್ಗೆ ಕಿಚ್ಚು ಹತ್ತಿಸುತಿದ್ದ ಯುವಕ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ವಿನಾಯಕ್ ಶೆಟ್ಟಿ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕನ್ನಡಪರ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿದ್ದಾರೆ


About The Author

Leave a Reply

Your email address will not be published. Required fields are marked *