ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಪ್ರವಾಸಕ್ಕೆಂದು ಕುಮಟಾಕ್ಕೆ ತೆರಳಿದ್ದವರು, ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ನಗರದ ರಾಯಲ್ ಆರ್ಕಿಡ್ ಹಿಂಭಾಗದಲ್ಲಿರುವ ಗುಪ್ತಾ ಆಟೋಮೊಬೈಲ್ ನ ಪಾಲುದಾರರಾದ ಪ್ರಶಾಂತ್ ಗುಪ್ತ ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಶಿವಮೊಗ್ಗದಿಂದ ಇವರು 11 ಜನರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಆಯುಧ ಪೂಜೆಯ ದಿನ ಕುಮಟಾದ ಬಾಡ ಕಡಲ ತೀರದಲ್ಲಿ ಸಮುದ್ರಕ್ಕೆ ಇಳಿದಿದ್ಧಾರೆ. ಈ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.