ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ವಿಶೇಷ ಅತಿಥ್ಯ ಮುಂದುವರೆದಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ವಿಧಿಸಿ ಸಮಾಜದಲ್ಲಿ ಸುಧಾರಿತ ವ್ಯಕ್ತಿಗಳಾಗಿ ಹೊರಗೆ ಬರಲಿ ಎಂಬ ಕಲ್ಪನೆ ಕಲ್ಪನೆಯಾಗಿ ಉಳಿದಿದೆ.
ಸುಧಾರಿತ ವ್ಯಕ್ತಿಗಳಾಗುವ ಕ್ರಿಮಿನಲ್ ಗಳಿಗೆ ಜೈಲಿನಲ್ಲಿ ಮೊಬೈಲು, ಬೀಡಿಗಳು, ಗಾಂಜಾಗಳು ಸಪ್ಲೆ ಆಗುತ್ತಿವೆ ಎಂದರೆ ಅಚ್ಚರಿ ಪಡುವಂತಾಗಿದೆ. ಜೈಲು ಸಿಬ್ಬಂದಿಗಳೇ ಅಪರಾಧಿಗಳ ಜೊತೆ ಕೈ ಜೋಡಿಸುತ್ತಿದ್ದಾರಾ ಎಂಬ ಅನುಮಾನ ಹೆಚ್ಚಾಗಿದೆ. ಈ ಅನುಮಾನಕ್ಕೆ ಈ ಎಫ್ಐಆರ್ ಪುಷ್ಠಿ ನೀಡುತ್ತಿದೆ.
ಅ. 21 ರಂದು ಕೇಂದ್ರ ಕಾರಾಗೃಹದಲ್ಲಿ ತುಂಗ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆದಿದ್ದು ದಾಳಿಯಲ್ಲಿ ಕಾರ್ಬನ್ ಕಂಪನಿಯ ಮೊಬೈಲ್ ಪತ್ತೆಯಾಗಿದೆ. ಈಮೊಬೈಲ್ ನ್ನ ಜೈಲಿನ ತೋಟದ ನೆಲದಲ್ಲಿ ಹೂತುಹಾಕಲಾಗಿತ್ತು. ಅನುಮಾನದ ಮೇರೆಗೆ ಅಹೆದಾಗ ಮೊಬೈಲ್ ಪತ್ತೆಯಾಗಿದೆ.
ಪ್ಲಾಸ್ಟಿಕ್ ಕವರ್ ನಲ್ಲಿ ಮುಚ್ಚಿ ಸಿಮ್ ಗಳನ್ನ ತೆಗೆದು ಮಣ್ಣಿನಲ್ಲಿ ಹೂತು ಹಾಕಲಾಗಿದೆ. ದಾಳಿಯ ವೇಳೆ ಈ ಮೊಬೈಲ್ ಮತ್ತು ಕತ್ತರಿ, ರಾಶಿ ರಾಶಿ ಮಂಗಳೂರು 93 ನಂಬರ್ ಮಾರ್ಕಿನ ಬೀಡಿಗಳು ರಾಶಿ ರಾಶಿ ಬೆಂಕಿಪೊಟ್ಟಣಗಳು ಪತ್ತೆಯಾಗಿವೆ. ತುಂಗಾಬ್ಲಾಕ್ 12 ರ ಮುಂದಿನ ತೋಟದಲ್ಲಿ ಮೊಬೈಲ್ ಪತ್ತೆಯಾದರೆ, ಬ್ಲಾಕ್ 36 ರ ಮುಂಭಾಗದಲ್ಲಿ ಕತ್ತರಿಯನ್ನ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅಲ್ಲಲ್ಲಿ ಬೀಡಿಗಳ ಪ್ಯಾಕ್ ಗಳು ಪತ್ತೆಯಾಗಿವೆ. ಜೈಲಿನ ಸಿಬ್ಬಂದಿಗಳ ಸಹಾಯವಿಲ್ಲದೆ ಹೇಗೆ ಹೋದವು ಎಂಬ ಅನುಮಾನ ಹುಟ್ಟಿಸಿವೆ.
ಇದೊಂದು ಹೈಫ್ರೊಫೈಲ್ ಕೇಸ್ ಇರಬಹುದಾ ಎಂಬ ಅನುಮಾನವನ್ನೂ ಹುಟ್ಟುಹಾಕಿಸಿವೆ. ದಾಳಿ ಹಿನ್ನಲೆಯಲ್ಲಿ ಪತ್ತೆಯಾದ ವಸ್ತುಗಳ ಆಧಾರದ ಮೇರೆಗೆ ತುಂಗ ನಗರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಜೈಲಿನಲ್ಲಿ ಎಲ್ಲವೂ ಸರಿಯಿಲ್ಲವೆಂಬ ಅನುಮಾನಕ್ಕೆ ಈ ಎಫ್ಐಆರ್ ಪುಷ್ಠಿ ನೀಡುತ್ತಿದೆ.