ಹುಂಚದಕಟ್ಟೆಯಲ್ಲಿ ಮೆಸ್ಕಾ ಇಲಾಖೆ ಎಡವಟ್ಟಿಗೆ ವಿದ್ಯುತ್ ತಗುಲಿ ವೃದ್ದೆ ಸಾವು|mescom

ಹುಂಚದಕಟ್ಟೆಯಲ್ಲಿ ಮೆಸ್ಕಾ ಇಲಾಖೆ ಎಡವಟ್ಟಿಗೆ ವಿದ್ಯುತ್ ತಗುಲಿ ವೃದ್ದೆ ಸಾವು

ವಿದ್ಯುತ್ ತಂತಿ ತುಂಡಾಗಿ ಮನೆ ಬೇಲಿಗೆ ಬಿದ್ದ ಪರಿಣಾಮ ವಿದ್ಯುತ್ ತಗಲಿ ವೃದ್ಧೆ ಸಾವನ್ನಪ್ಪಿದ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ.

ಕಗ್ಗುಂಡಿ ವರಮಹಾಲಕ್ಷ್ಮಿ (73) ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ.

ತಡರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಹಳೆಯದಾದ ವಿದ್ಯುತ್‌ ತಂತಿಯೊಂದು ವೃದ್ಧೆಯ ಮನೆಯ ಪಕ್ಕದಲ್ಲೇ ತುಂಡಾಗಿ ಮನೆಯ ಆವರಣದ ಬೇಲಿಗೆ ಬಿದ್ದಿತ್ತು. 

ಇದನ್ನು ನೋಡದ ವೃದ್ಧೆ ಎಂದಿನಂತೆ ವೃದ್ಧೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಟಿದ್ದರು. ದೇಗುಲಕ್ಕೆ ಹೋಗುವ ಭರದಲ್ಲಿ ವೃದ್ಧೆ ಗೇಟ್ ತೆಗೆಯಲು ಮುಂದಾದಗ ಶಾಕ್‌ ಹೊಡೆದಿದೆ. ಈ ಸಂದರ್ಭದಲ್ಲಿ ವೃದ್ಧೆಯ ರಕ್ಷಣೆಗೆ ಮಕ್ಕಳಿಗಳು ಘಟನಾ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ.

 ಆಗ ವೃದ್ಧೆಯ ಮಕ್ಕಳಿಗೆ ವಿದ್ಯುತ್ ತಗುಲಿದೆ. ಬಳಿಕ ವಿದ್ಯುತ್ ಸಂಪರ್ಕ ತಪ್ಪಿಸೋದಕ್ಕೆ ಮಾಹಿತಿ ನೀಡುವಷ್ಟರಲ್ಲಿ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ವೃದ್ಧೆಯ ಸಾವಿಗೆ ಮೆಸ್ಕಾಂ ಅಧಿಕಾರಿಗಳ ಎಡವಟ್ಟುಪ್ರಮುಖ ಕಾರಣವೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *