ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹದ ವಾತಾವರಣ ಬೇಕು – ತಿರುಪತಿ ನಾಯಕ್
ಹೊಸನಗರ : ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹದಾಯಕವಾದ ವಾತಾವರಣ ಸಮಾಜದ ಎಲ್ಲಾ ಸ್ತರಗಳಿಂದ ಸಿಗಬೇಕಾಗಿದೆ. ಈ ತರಹದ ಪ್ರೋತ್ಸಾಹ ಸಿಕ್ಕಲ್ಲಿ ಎಲ್ಲಾ ಕಡೆಯಲ್ಲೂ ಸಾಹಿತ್ಯದ ವಾತಾವರಣ ಕಾಣಬಹುದು ಎಂದು ತಾಲೂಕಿನ ಹಿರಿಯ ಸಾಹಿತಿ ಹೊಸನಗರದ ತಿರುಪತಿ ನಾಯಕ್ ತಿಳಿಸಿದರು.
ಅವರು ದಿನಾಂಕ 21-10-2023 ರಂದು ಹೊಸನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ದಸರಾ ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸಿ ಮಾತನಾಡಿ ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹದಾಯಕವಾದ ವಾತಾವರಣ ಸಮಾಜದ ಎಲ್ಲಾ ಸ್ತರಗಳಿಂದ ಸಿಗಬೇಕಾಗಿದೆ. ಈ ತರಹದ ಪ್ರೋತ್ಸಾಹ ಸಿಕ್ಕಲ್ಲಿ ಎಲ್ಲಾ ಕಡೆಯಲ್ಲೂ ಸಾಹಿತ್ಯದ ವಾತಾವರಣ ಕಾಣಬಹುದು ಎಂದರು.
ಹಿರಿಯ ಸಾಹಿತಿ ನಾಗರಕೊಡಿಗೆ ಗಣೇಶ್ ಮೂರ್ತಿಯವರು ಮಾತನಾಡಿ ಮಕ್ಕಳಲ್ಲಿ ಸಾಹಿತ್ಯ ರಚನೆ ಮಾಡುವ ಪ್ರೋತ್ಸಾಹದಾಯಕ ವಾತಾವರಣ ಪ್ರತಿ ಕುಟುಂಬದಲ್ಲಿ ಸಿಕ್ಕರೆ ಮುಂದೆ ಪ್ರತಿ ಕುಟುಂಬದಲ್ಲಿ ಒಬ್ಬ ಸಾಹಿತಿಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ತ.ಮ.ನರಸಿಂಹ ವಹಿಸಿದ್ದರು.
ದಸರಾ ಕವಿ ಗೋಷ್ಠಿಯಲ್ಲಿ ಕವಿಗಳಾದ ತಿರುಪತಿ ನಾಯಕ್,
ನಾಗರಕೊಡಿಗೆ ಗಣೇಶ ಮೂರ್ತಿ, ಎಚ್ ಆರ್ ಪ್ರಕಾಶ್, ಕುಮಾರಿ ಅನನ್ಯ, ಕುಮಾರಿ ತೇಜಸ್ವಿನಿ, ಕುಮಾರಿ ತನುಶ್ರೀ ಮುಂತಾದವರು ಕವನ ವಾಚನ ಮಾಡಿದರು. ಸಭೆಯಲ್ಲಿ ಕೋಶಾಧ್ಯಕ್ಷ ಎನ್ ಹೆಚ್ ನಿಂಗಮೂರ್ತಿ, ಮಲ್ಲಿಕಾರ್ಜುನ ಸ್ವಾಮಿ, ರಾಘವೇಂದ್ರ ಜಯನಗರ, ಪ್ರಶಾಂತ್ ಹೊಸನಗರ, ಚನ್ನಬಸಪ್ಪ ಗೌಡ, ಗೀತಾ, ಅಕ್ಷತಾ,ಎನ್ ಆರ್ ರಮೇಶ್, ಇಕ್ಬಾಲ್ ಜಯನಗರ, ಉಪಸ್ಥಿತರಿದ್ದರು.
ಗೋಷ್ಠಿಯ ಮೊದಲಲ್ಲಿ ಹೆಚ್ಆರ್ ಪ್ರಕಾಶ್ ರವರು ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ಎಂಕೆ ವೆಂಕಟೇಶಮೂರ್ತಿ ವಂದಿಸಿದರು.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್