January 11, 2026

ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಡ್ರೈವರ್ ಆತ್ಮಹತ್ಯೆ|crime news

ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಡ್ರೈವರ್ ಆತ್ಮಹತ್ಯೆ 
ತೀರ್ಥಹಳ್ಳಿ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ನಗುಮಗು ಆಂಬುಲೆನ್ಸ್ ವಾಹನದ ಸೇವೆಯ ಚಾಲಕ ವೃತ್ತಿ ಮಾಡಿಕೊಂಡು ಬೆಟ್ಟಮಕ್ಕಿಯಲ್ಲಿ ವಾಸವಾಗಿದ್ದ ರಮೇಶ್ ನೇಣುಬಿಗಿದುಕೊಂಡು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಬೆಟ್ಟಮಕ್ಕಿಯ ತನ್ನ ಬಾಡಿಗೆ ಮನೆಯಲ್ಲಿ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರಮೇಶ್ ಅನೇಕ ಸಂದರ್ಭದಲ್ಲಿ ಜೀವದ ನೂರಾರು ಜನರ ಜೀವ ಉಳಿಸಿದ್ದು ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು.

ಮೃತದೇಹವನ್ನು ಅವರ ಸ್ವಂತ ಊರು ಹೊಸನಗರಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಮೇಶ್ ಸಾವಿಗೆ ಜೆಸಿ ಆಸ್ಪತ್ರೆಯ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *