POSTMAN NEWS

ನೈಜ ಸುದ್ದಿ ನೇರ ಬಿತ್ತರ..

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಸಡಗರದ ಆಯುಧ ಪೂಜೆ – ಡಿವೈಎಸ್ ಪಿ ಸೇರಿದಂತೆ ಎಲ್ಲಾ ಪೊಲೀಸರು ಭಾಗಿ|dasara

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಸಡಗರದ ಆಯುಧ ಪೂಜೆ – ಡಿವೈಎಸ್ ಪಿ ಸೇರಿದಂತೆ ಎಲ್ಲಾ ಪೊಲೀಸರು ಭಾಗಿ
ತೀರ್ಥಹಳ್ಳಿ : ನಾಡಹಬ್ಬ ದಸರಾ ಹಿಂದಿನ ದಿನವಾದ ಇಂದು ಆಯುಧ ಪೂಜೆಯನ್ನು ಪಟ್ಟಣದಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

 ಸರ್ಕಾರಿ ವಾಹನಗಳು, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಯಿತು.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ  ಚಾಮುಂಡೇಶ್ವರಿ ದೇವಿಯ ಫೋಟೋ ಜೊತೆಗೆ ಕಳಶ ಪ್ರತಿಷ್ಠಾಪನೆ ಮಾಡಿ ಜೊತೆಗೆ ವಾಹನಗಳಿಗೆ ಪೂಜೆ ಸಲ್ಲಿಸಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ ಪೂಜೆ ಮಾಡಲಾಯಿತು.

ಈ ಪೂಜೆಯಲ್ಲಿ ಡಿವೈಎಸ್ ಪಿ ಗಜಾನನ ವಾಮನ ಸುತಾರ, ಇನ್ಸ್ಪೆಕ್ಟರ್ ಅಶ್ವಥ್ ಗೌಡ, ಪಿಎಸ್ಐ ಸುಷ್ಮಾ, ಪಿಎಸ್ಐ ಶಿವನಗೌಡ ಸೇರಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.