Headlines

ಯೋಗ ಮಾಡಿ ಗಮನ ಸೆಳೆದ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್!!!|yoga

ಯೋಗ ಮಾಡಿ ಗಮನ ಸೆಳೆದ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್!!!|

ಶಿವಮೊಗ್ಗದ ಮಹಾನಗರ ಪಾಲಿಕೆ ‘ಶಿವಮೊಗ್ಗ ದಸರಾ’ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಈ ಕಾರ್ಯಕ್ರಮವನ್ನು ಯು.ಟಿ. ಖಾದರ್ ಉದ್ಘಾಟಿಸಿ, ಯೋಗಪಟುಗಳೊಂದಿಗೆ ತಾವು ಕೂಡ ಯೋಗ ಮಾಡಿದ್ದಾರೆ. ಯೋಗದ ಎಲ್ಲಾ ಆಸನಗಳನ್ನು ಲೀಲಾಜಾಲವಾಗಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಯು.ಟಿ ಖಾದರ್, ನಾನು 6ನೇ ತರಗತಿಯಿಂದ ಯೋಗಾಸನ ಮಾಡುತ್ತಿದ್ದೇನೆ. ನನಗೆ ಮೊದಲಿನಿಂದಲೂ ಯೋಗದ ಪರಿಚಯವಿದೆ. ಯೋಗವನ್ನು ಎಲ್ಲರು ಮಾಡಬೇಕು. ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ನನ್ನ ತಾಯಿಯವರ ತಂದೆ, ನನ್ನ ಅಜ್ಜ ಯೋಗ ಗುರುವಿಗೆ ಮನೆಗೆ ಬಂದು ಕಲಿಸಿಕೊಡುವಂತೆ ಕರೆ ನೀಡುತ್ತಿದ್ದರು. ಇದರಿಂದ ಯೋಗ ನನಗೆ ಕರಗತವೆಂದರು.

ಎಲ್ಲರೂ ಯೋಗಾಸನ ಮಾಡಬೇಕು.ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದ ಸಭಾಪತಿಗಳು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ವಿಚಾರದ ಬಗ್ಗೆಯೂ ಮಾತನಾಡಿ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ.ಎಷ್ಟು ದಿನ ಅಧಿವೇಶನ ನಡೆಯಲಿದೆ ಎಂಬುದು ಸರ್ಕಾರ ತೀರ್ಮಾನಿಸಲಿದೆ ಎಂದರು.

ನಾನು ಹಾಗೂ ಪರಿಷತ್ ಸಭಾಪತಿಗಳು ತೆರಳಿ ಅಧಿವೇಶನದ ಬಗ್ಗೆ ಪರಿಶೀಲನೆ ನಡೆಸುತ್ತೇವೆ.ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದೇನೆ ಎಂದರು.‌

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.