Headlines

ತೀರ್ಥಹಳ್ಳಿಯಲ್ಲಿ ಮತ್ತೊಂದು ಅಶ್ಲೀಲ ವೀಡಿಯೋ ವೈರಲ್|viral

ತೀರ್ಥಹಳ್ಳಿ ಮತ್ತೊಂದು ಅಶ್ಲೀಲ ವೀಡಿಯೋ ವೈರಲ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಶ್ಲೀಲ ವಿಡಿಯೋಗಳು ಹೆಚ್ಚಾಗಿ ವೈರಲ್​ ಆಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಶ್ಲೀಲ ವಿಡಿಯೋಗಳು ವೈರಲ್​ ಆಗಿ ಕೇಸ್​ ಕೂಡ ದಾಖಲಾಗಿದ್ದವು. ಇದೀಗ ಮತ್ತೊಂದು ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗಿದೆ. 




ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೆ ಅಶ್ಲೀಲ ವಿಡಿಯೋಗಳು ಹರಿದಾಡಿದ್ದು, ಆ ಸಂಬಂಧ  ಕೇಸ್​ ಗಳು ಸಹ ದಾಖಲಾಗಿದ್ದವು. ಆನಂತರ ಹನಿಟ್ರ್ಯಾಪ್ ಸಂಬಂಧ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣ ಹೈಪ್ರೊಫೈಲ್ ಕೇಸ್ ಆಗಿ ಮಾರ್ಪಟ್ಟಿತ್ತು. ಇವೆಲ್ಲದರ ಬೆನ್ನಲ್ಲೆ ಮತ್ತೊಂದು ಅಶ್ಲೀಲ ವಿಡಿಯೋ ಹೊರಬಿದ್ದಿದೆ. 

ಲಾಡ್ಜ್​ ರೀತಿಯಲ್ಲಿ ಕಾಣುವ ರೂಂನಲ್ಲಿ ನಡೆದ ಅಶ್ಲೀಲತೆಯ ವಿಡಿಯೋ ಇದಾಗಿದೆ. ದೃಶ್ಯದಲ್ಲಿ ಇರುವ ವ್ಯಕ್ತಿಯು ರಾಜಕೀಯ ಮುಖಂಡರೊಬ್ಬರ ಆಪ್ತ ವಲಯದಲ್ಲಿ ಇರುವವರು ಎಂದು ಜನರು ಮಾತನಾಡಿಕೊಳ್ತಿದ್ದಾರೆ. 

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಹಿಂದೆ ಹಲವಾರು ಪ್ರಕರಣಗಳು ಹೊರಬಿದ್ದಿದ್ದವು. ಆನಂತರ ಆಪ್ರಾಪ್ತಯರನ್ನು ದುರ್ಬಳಕೆ ಮಾಡಿಕೊಂಡ ಆರೋಪವೊಂದು ಕೇಳಿಬಂದಿತ್ತಷ್ಟೆ ಅಲ್ಲದೆ ಕೆಲವು ವಿಡಿಯೋಗಳು ವೈರಲ್ ಆಗಿದ್ದವು. ಈ ಸಂಬಂಧ ಯುವಕನೊಬ್ಬ ಅರೆಸ್ಟ್ ಆಗಿದ್ದ. ತದನಂತರ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದರ ಬಗ್ಗೆ ದೂರು ದಾಖಲಾಗಿತ್ತು. ಮೇಲಾಗಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲದ ಬಳಿಕ ಹನಿಟ್ರ್ಯಾಪ್ ಟೀಂನದ್ದು ತೀರ್ಥಹಳ್ಳಿಯಲ್ಲಿ ದೊಡ್ಡಮಟ್ಟದ ಸುದ್ದಿ ಮಾಡಿತ್ತು. 




ಈ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ತೀರ್ಥಹಳ್ಳಿಯಲ್ಲಿ ಜೋರು ಚರ್ಚೆಗೆ ಗ್ರಾಸವಾಗಿದೆ. ಇಂತಹ ಅಸಹ್ಯಕರ ವಿಡಿಯೋಗಳು ಹಂಚಿಕೆಯಾಗುವುದು ತಾಲ್ಲೂಕಿನ ಘನತೆಗೆ ದಕ್ಕೆ ತರುತ್ತಿದೆ. ಹೀಗಾಗಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ತೀರ್ಥಹಳ್ಳಿಯಲ್ಲಿ ಕೇಳಿಬರುತ್ತಿದೆ.






Leave a Reply

Your email address will not be published. Required fields are marked *