ಓಮಿನಿ ಓಡಿಸಿದ ಅಪ್ರಾಪ್ತ ಪುತ್ರ – ತಂದೆಗೆ 25 ಸಾವಿರ ದಂಡ!!|awareness news


ಓಮಿನಿ ಓಡಿಸಿದ ಅಪ್ರಾಪ್ತ ಪುತ್ರ – ತಂದೆಗೆ 25 ಸಾವಿರ ದಂಡ!!

ಶಿವಮೊಗ್ಗ : ಚಾಲನಾ ಪರವಾನಗಿ (ಡಿ.ಎಲ್) ಇಲ್ಲದೇ ಒಮಿನಿ ವಾಹನ ಚಲಾಯಿಸುತ್ತಿದ್ದ ಬಾಲಕನ ತಂದೆಗೆ ಇಲ್ಲಿನ ಮೂರನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹ 25 ಸಾವಿರ ದಂಡ ವಿಧಿಸಿದೆ.

ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರದ ನಿವಾಸಿ ಇಲಿಯಾಸ್ (41) ದಂಡ ಪಾವತಿಸಬೇಕಾದವರು.



ಇಲಿಯಾಸ್ ಅವರ 17 ವರ್ಷದ ಪುತ್ರ ಕಳೆದ ಸೆ.9ರಂದು ಶಿವಮೊಗ್ಗ ನಗರದಲ್ಲಿ ಒಮಿನಿ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಕರ್ನಾಟಕ ಸಂಘದ ಬಳಿಯ ಬಿ.ಎಚ್.ರಸ್ತೆಯಲ್ಲಿ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಎಸ್.ಶಿವಣ್ಣನವರ್ ವಾಹನ ತಪಾಸಣೆ ನಡೆಸಿದ್ದು, ಒಮಿನಿ ವಾಹನವನ್ನು ಪರವಾನಗಿ ಇಲ್ಲದೇ ಬಾಲಕ ಓಡಿಸಿ ನಿಯಮ ಉಲ್ಲಂಘನೆ ಮಾಡಿರುವುದು ಗೊತ್ತಾಗಿದೆ.

ಹೀಗಾಗಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿಕೊಂಡು ಚಾಲನೆಗೆ ಅರ್ಹತೆ ಹೊಂದಿರದ ಪುತ್ರನಿಗೆ ವಾಹನ ನೀಡಿದ್ದ ತಂದೆಯ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ವರದಿ ಸಲ್ಲಿಸಿದ್ದರು. ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.





Leave a Reply

Your email address will not be published. Required fields are marked *