ಆರು ವರ್ಷದ ಮಗು ಸೇರಿ ಐವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಳೆಬೆಳಗಲು ಗ್ರಾಮದಲ್ಲಿ ನಡೆದಿದೆ. ಮಗುವಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲಾ ವಾಹನ ಇಳಿದು ಮನೆಗೆ ಹೋಗುವಾಗ ಆರು ವರ್ಷದ ಬಾಲಕಿ ದಾಳಿ ನಡೆಸಿದ್ದು ಮುಖದ ಮೇಲೆ ಗಾಯಗಳಾಗಿವೆ.
ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಮಗುವಿನ ಮೇಲೆ ದಾಳಿಗೆ ಮುಂದಾದಾಗ ಪೋಷಕರು ರಕ್ಷಿಸಿದ್ದಾರೆ. ವಯಸ್ಕರು ಹಾಗೂ ಹಸುವಿನ ಮೇಲೆಯೂ ದಾಳಿ ನಡೆಸಿದೆ.
ನಾಯಿಗೆ ಹುಚ್ಚು ಹಿಡಿದಿದ್ದು ಅದನ್ನು ಸೆರೆಹಿಡಿದು ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.