w
Headlines
Home » ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ|hombuja

ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ|hombuja

ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ
ರಿಪ್ಪನ್ ಪೇಟೆ : ಶ್ರೀಕ್ಷೇತ್ರ ಹೊಂಬುಜದಲ್ಲಿ ದೃಢಬಲ ಆಯುರ್ವೇದ ಶಿಬಿರ
ಹೊಂಬುಜ ಜೈನ ಮಠದಲ್ಲಿ ದಿನಾಂಕ  ಸೆಪ್ಟೆಂಬರ್ ೨೩ ರಿಂದ ೩೦ ವರೆಗೆ ದೃಢಬಲ ಆಯುರ್ವೇದ ವಸತಿ ಶಿಬಿರವನ್ನು ಆಯೋಜಿಸಲಾಗಿದೆ.

ಆಪ್ತಾಸ್ ಆಯುರ್ವೇದ ಎಂಬ ಸಂಸ್ಥೆಯು, ಶ್ರೀ ಕ್ಷೇತ್ರ ಹೊಂಬುಜದ ಸಹಕಾರದಿಂದ ಆಯುರ್ವೇದದ ವೈದ್ಯ ವಿದ್ಯಾರ್ಥಿಗಳಿಗಾಗಿ (ಬಿ.ಎ.ಎಮ್.ಎಸ್. ತೃತೀಯ ವರ್ಷದ) ಈ ವಸತಿ ಶಿಬಿರವನ್ನು ಆಯೋಜಿಸಿದ್ದಾರೆ. 

ಈ ಶಿಬಿರದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆಯುರ್ವೇದ ರಂಗದ ಸಾಧಕರು, ಪ್ರಸಿದ್ಧ ವೈದ್ಯರು ಹಾಗೂ ಇನ್ನಿತರ ಗಣ್ಯರು, ಸಂಪನ್ಮೂಲ ವ್ಯಕ್ತಿಗಳಾಗಿ  ಆಗಮಿಸಲಿದ್ದಾರೆ. ಸುಮಾರು ೧೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

 ಈ ಶಿಬಿರದ ಪ್ರಯುಕ್ತ ಶ್ರೀಕ್ಷೇತ್ರದ ಆಶ್ರಯದಲ್ಲಿ ಸೆಪ್ಟೆಂಬರ್ ೨೭ ರಂದು ಆಯುರ್ವೇದ ಕುರಿತು ವಸ್ತು ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಏರ್ಪಡಿಸಲಾಗಿದೆ.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

 ದಿನಾಂಕ ಸೆಪ್ಟೆಂಬರ್ 23ರ ಪೂರ್ವಾಹ್ನ ಶಿಬಿರದ ಉದ್ಘಾಟನೆ ನಡೆಯಲಿದ್ದು ಜೈನ ಮಠದ  ಜಗದ್ಗುರು ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.