w
Headlines
Home » ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ|fest

ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ|fest

ಹೊಸನಗರದಲ್ಲಿ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ
ಹೊಸನಗರ : ಇಂದು ಪಟ್ಟಣದ ಸಂತ ಅಂತೋನಿ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಮ ಮೊ0ತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿ ವರ್ಣ ರಂಜಿತವಾಗಿ ಆಚರಿಸಿದರು.

ತೆನೆ ಹಬ್ಬವೆಂದು ಕರೆಯಲ್ಪಡುವ ಈ ಹಬ್ಬದ ಪ್ರಯುಕ್ತ ಚರ್ಚಿನಲ್ಲಿ ವಿಶೇಷ ಬಲಿಪೂಜೆ ಹೊಸ ತೆನೆಯ ಆಶೀರ್ವಚನ ವಿತರಣೆ ಮಾಡಿ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಸೈಮನ್ ಚಾಲನೆ ನೀಡಿ ಸಂದೇಶ ಹಾಗೂ ಶುಭಾಶಯ ವಿನಿಮಯ ಮಾಡಿದರು.

ಕ್ರಿಶ್ಚಿಯನ್ ಬಾಂಧವರು ಕಬ್ಬು ಹಾಗೂ ಸಿಹಿ ತಿಂಡಿ ವಿತರಣೆ ಹಾಗೂ ಸ್ಥಳೀಯವಾಗಿ ಬೆಳೆಯುವ ತರಕಾರಿ ಪಲ್ಯಗಳ ಸಾರು ಸಿಹಿ ಪಾಯಸದಿಂದ ಕೂಡಿದ ಸಸ್ಯಾಹಾರಿ ಭೋಜನ ತೆನೆ ಹಬ್ಬದ ವಿಶೇಷವಾಗಿತ್ತು.

ಮೆರವಣಿಗೆಯಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಕ್ರಿಶ್ಚಿಯನ್ ಭಾಂಧವರು ಪಾಲ್ಗೊಂಡಿದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.