January 11, 2026

ಉಳ್ಳೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – ಗಾಯಾಳುಗಳು ಆಸ್ಪತ್ರೆಗೆ ದಾಖಲು

ಸಾಗರ ತಾಲೂಕಿನ ಉಳ್ಳೂರಿನ ಹೆದ್ದಾರಿಯ ರಸ್ತೆಯಲ್ಲಿ KSRTC ಬಸ್ ಪಲ್ಟಿಯಾದ ಘಟನೆ ನಡೆದಿದೆ.ಬಸ್ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತಿದ್ದ ವೇಳೆ ಈ ಘಟನೆ ನಡೆದಿದೆ.

ಉಳ್ಳೂರು ರಸ್ತೆಯ ತಿರುವಿನ ಬಳಿ ಬೈಕ್ ಒಂದು ಅಡ್ಡ ಬಂದಿದ್ದು ಬೈಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಬಸ್ ಚಾಲಕ ತಿರುವು ತೆಗೆದುಕೊಂಡಿದ್ದಾರೆ. ಆದರೆ ರಸ್ತೆಯ ಮೇಲೆ ಮಣ್ಣು ಇದ್ದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದ್ದು, ಬಸ್ ನಲ್ಲಿದ್ದ 20 ಜನರಿಗೆ ಗಾಯಗಳಾಗಿದ್ದು ಅವರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರಿಗೆ ಹೆಚ್ಚಿನ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಚಾಲಕ ಸಣ್ಣಪ್ಪ ಗಾಣಿಗೇರ, ನಿರ್ವಾಹಕ ಗೌಡಪ್ಪ ಗೌಡರ್ ಇಬ್ಬರಿಗೂ ಗಾಯಗಳಾಗಿದೆ. 

ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *